ದೇಶದ ಮೊದಲ ಮಹಿಳಾ ಬೈಕರ್ 'ವೀನು ಪಲಿವಾಲ್' ಅಪಘಾತದಲ್ಲಿ ಸಾವು

ದೇಶದ ಮೊದಲ ಮಹಿಳಾ ಬೈಕರ್ ಎಂದೇ ಖ್ಯಾತಿ ಗಳಿಸಿದ್ದ ವೀನು ಪಲಿವಾಲ್ ಅವರು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆಂದು ಮಂಗಳವಾರ ತಿಳಿದುಬಂದಿದೆ...
ದೇಶದ ಮೊದಲ ಮಹಿಳಾ ಬೈಕರ್ ವೀನು ಪಲಿವಾಲ್ (ಸಂಗ್ರಹ ಚಿತ್ರ)
ದೇಶದ ಮೊದಲ ಮಹಿಳಾ ಬೈಕರ್ ವೀನು ಪಲಿವಾಲ್ (ಸಂಗ್ರಹ ಚಿತ್ರ)

ಭೋಪಾಲ್: ದೇಶದ ಮೊದಲ ಮಹಿಳಾ ಬೈಕರ್ ಎಂದೇ ಖ್ಯಾತಿ ಗಳಿಸಿದ್ದ ವೀನು ಪಲಿವಾಲ್ ಅವರು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ವೀನು ಪಲಿವಾಲ್ (44) ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ವೀನು ಅವರು ತಮ್ಮ ಹಾರ್ಲೆ ಡೇವಿಡ್ಸನ್ ಬೈಕಿನಲ್ಲಿ ದೇಶಾದ್ಯಂತ ಪ್ರವಾಸ ಹೊರಟಿದ್ದರು. ನಿನ್ನೆ ಲಕ್ನೋದಿಂದ ಭೋಪಾಲ್ ಗೆ ಪ್ರಯಾಣಿಸುತ್ತಿದ್ದ ವೇಳೆ ಅಪಾಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಭೋಪಾಲ್ ಗೆ 100 ಕಿ.ಮೀ ದೂರದ ಗ್ಯಾರಸ್ಪುರ್ ಎಂಬ ಪ್ರದೇಶದಲ್ಲಿ ವೀನು ಅವರ ಬೇಕ್ ನಿಯಂತ್ರಣವನ್ನು ಕಳೆದುಕೊಂಡು ಬಿದ್ದಿತ್ತು. ಎಲ್ಲಾ ರೀತಿಯ ಎಚ್ಚರಿಕೆಯನ್ನು ವಹಿಸಿದ್ದರೂ ಕೂಡ ವೀನು ಅವರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೂ ಅವರು ಬದುಕುಳಿದಿಲ್ಲ ಎಂದು ತಿಳಿದುಬಂದಿದೆ.

ವೀನು ಅವರು ಬೈಕ್ ರೈಡಿಂಗ್ ಆಸಕ್ತಿ ಅವರು ಕಾಲೇಜಿನಲ್ಲಿದ್ದಾಗಲೇ ಆರಂಭವಾಗಿತ್ತು. 180 ಕಿ.ಮೀ. ವೇಗದಲ್ಲಿ ಬೈಕ್ ಚಲಾಯಿಸುವ ಮೂಲಕ ವೀನು ದೇಶದಾದ್ಯಂತ ಖ್ಯಾತಿಯನ್ನು ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com