ಕೇಂದ್ರ ಸಚಿವ ವೆಂಕಯ್ಯನಾಯ್ಡು
ಕೇಂದ್ರ ಸಚಿವ ವೆಂಕಯ್ಯನಾಯ್ಡು

ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿಕೆ ನಿರಾಕರಿಸಿದ ವೆಂಕಯ್ಯನಾಯ್ಡು

ಶನಿಶಿಂಗ್ಣಾಪುರ ದೇಗುಲದಲ್ಲಿ ಮಹಿಳೆಯರಿಗೆ ಪ್ರವೇಶ ಮಾಡಲು ಅನುಮತಿ ನೀಡಿದೆ ಅತ್ಯಾಚಾರ ಸಂಖ್ಯೆಗಳು ಹೆಚ್ಚಾಗುತ್ತದೆ ಎಂದು ಹೇಳಿದ್ದ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಹೇಳಿಕೆಯನ್ನು...

ನವದೆಹಲಿ: ಶನಿಶಿಂಗ್ಣಾಪುರ ದೇಗುಲದಲ್ಲಿ ಮಹಿಳೆಯರಿಗೆ ಪ್ರವೇಶ ಮಾಡಲು ಅನುಮತಿ ನೀಡಿದೆ ಅತ್ಯಾಚಾರ ಸಂಖ್ಯೆಗಳು ಹೆಚ್ಚಾಗುತ್ತದೆ ಎಂದು ಹೇಳಿದ್ದ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಹೇಳಿಕೆಯನ್ನು ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರು ಮಂಗಳವಾರ ನಿರಾಕರಿಸಿದ್ದಾರೆ.

ಸ್ವರೂಪನಂದ ಸ್ವಾಮಿಗಳು ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸ್ವರೂಪನಂದ ಸ್ವಾಮಿಗಳು ನೀಡಿರುವ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದು, ಈ ಕುರಿತಂತೆ ಮತ್ತಷ್ಟು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ನಿನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ಉದ್ಭವಿಸಿರುವ ಬರ ಸಮಸ್ಯೆ ಕುರಿತಂತೆ ಹರಿದ್ವಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ್ದ ಸ್ವರೂಪಾನಂದ ಸ್ವಾಮಿಗಳು, ಸಾಯಿ ಬಾಬಾ ಓರ್ವ ಫಕೀರ. ಅವರನ್ನು ಪೂಜೆ ಮಾಡಿದರೆ ಅದು ಅಮಂಗಳಕರವಾಗುತ್ತದೆ. ಮಹಾರಾಷ್ಟ್ರದಲ್ಲಿ ಇಂದು ಬರ ಬಂದಿರುವುದು ಸಾಯಿ ಬಾಬಾರನ್ನು ಪೂಜೆ ಮಾಡಿದ ಕಾರಣಕ್ಕೆ ಎಂದು ಹೇಳಿದ್ದರು.

ಅಲ್ಲದೆ, ಶನಿಶಿಂಗ್ಣಾಪುರ ದೇಗುಲ ವಿವಾದ ಕುರಿತಂತೆ ಮಾತನಾಡಿ. ಮಹಿಳೆಯರು ಶನಿ ಶಿಂಗ್ಣಾಪುರ ದೇಗುಲದ ಗರ್ಭಗುಡಿ ಪ್ರವೇಶಿಸಿದರೆ ದುರಾದೃಷ್ಟ. ಮಹಿಳೆಯರು ಶನಿ ಶಿಂಗ್ಣಾಪುರ ದೇಗುಲ ಪ್ರವೇಶಿಸಿದರೆ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಾಗುತ್ತದೆ. ಶನಿ ಪಾಪದ ಗ್ರಹವಾಗಿದ್ದು, ಮಹಿಳೆಯರಿಗೆ ಶನಿ ಶಿಂಗ್ಣಾಪುರ ದೇಗುಲ ಪ್ರವೇಶಕ್ಕೆ ಅನುಕೂಲ ಮಾಡಿಕೊಡಬಾರದು ಎಂದು ಹೇಳಿದ್ದರು.

ಈ ಹಿಂದಷ್ಟೇ ಸಾಯಿಬಾಬಾ ಆರಾಧನೆ ಕುರಿತಂತೆ ಮಾತನಾಡಿದ್ದ ಶಂಕರಾಚಾರ್ಯ ಅವರು, ಸಾಯಿ ಬಾಬಾ ಮನುಷ್ಯ. ಅವರು ದೇವರಲ್ಲ...ಅವರನ್ನು ನಂಬಬೇಡಿ. ಸಾಯಿಬಾಬಾಗೆ ದೇವಸ್ಥಾನ ನಿರ್ಮಿಸುವ ಅಗತ್ಯವಿಲ್ಲ. ವಿದೇಶಿ ಸಂಸ್ಥೆಗಳು ದುಡ್ಡು ಮಾಡುವುದಕ್ಕಾಗಿ ಇಂಥಾ ಪಿತೂರಿ ನಡೆಸುತ್ತಿವೆ. ಹಿಂದೂಗಳು ಒಗ್ಗಾಟ್ಟಾಗಿ ಇರುವುದು ಅವರಿಗೆ ಇಷ್ಟವಿಲ್ಲ. ಸಾಯಿಬಾಬಾ ಅವತಾರ ಪುರುಷನಲ್ಲ ಎಂದು ಹೇಳಿದ್ದರು.

Related Stories

No stories found.

Advertisement

X
Kannada Prabha
www.kannadaprabha.com