
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಎಐಎಂಐಎಂ ಮುಖಂಡ ಅಸಾವುದ್ದೀನ್ ಒವೈಸಿ, ಭಯೋತ್ಪಾದನೆ ಆರೋಪ ಎದುರಿಸುತ್ತಿರುವ ಮುಸ್ಲಿಂಮೇತರರ ಬಗ್ಗೆ ಕೇಂದ್ರ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕವೇ ಸುದ್ದಿಯಲ್ಲಿರುವ ಅಸಾವುದ್ದೀನ್ ಒವೈಸಿ ಇತ್ತೀಚೆಗೆ ಭಾರತ ಮಾತಾ ಕಿ ಜೈ ಘೋಷಣೆ ವಿಷಯದಲ್ಲಿ ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗ ಭಯೋತ್ಪಾದನೆ ಬಗ್ಗೆ ಇಂಥಹದ್ದೇ ಹೇಳಿಕೆ ನೀಡಿದ್ದಾರೆ.
ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯನ್ನು ಧರ್ಮದ ಪರಿಧಿಯಿಂದ ಹೊರತಾಗಿ ಪರಿಗಣಿಸಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದ್ದರೆ, ಅಸಾವುದ್ದೀನ್ ಒವೈಸಿ ಭಯೋತ್ಪಾದನೆಗೂ ಧರ್ಮಕ್ಕೂ ತಳುಕು ಹಾಕುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.
Advertisement