'ಗ್ರೇಟ್ ರೈಡರ್' ಮೃತ ವೀನು ಪಾಲಿವಾಲ್ ರನ್ನು ಸ್ಮರಿಸಿದ ನಗರದ ಬೈಕ್ ಸವಾರರು

ರಸ್ತೆ ಅಪಘಾತದಲ್ಲಿ ಸೋಮವಾರ ಮೃತಪಟ್ಟ ಭಾರತದ ಮೊದಲ ಮಹಿಳಾ ಬೈಕರ್ ಲೇಡಿ ಆಫ್ ದಿ ಹರ್ಲೆ ಎಂದೇ ಖ್ಯಾತಿ ಗಳಿಸಿದ್ದ ವೀನು ಪಾಲಿವಾಲ್(44)ರನ್ನು...
ವೀನು ಪಾಲಿವಾಲ್
ವೀನು ಪಾಲಿವಾಲ್

ಹೈದರಾಬಾದ್: ರಸ್ತೆ ಅಪಘಾತದಲ್ಲಿ ಸೋಮವಾರ ಮೃತಪಟ್ಟ ಭಾರತದ ಮೊದಲ ಮಹಿಳಾ ಬೈಕರ್ ಲೇಡಿ ಆಫ್ ದಿ ಹರ್ಲೆ ಎಂದೇ ಖ್ಯಾತಿ ಗಳಿಸಿದ್ದ ವೀನು ಪಾಲಿವಾಲ್(44)ರನ್ನು ನಗರದ ಬೈಕ್ ಸವಾರರು ಸ್ಮರಿಸಿದ್ದಾರೆ.

ವೀನು ಪಾಲಿವಾಲ್ ಸಾವು ಆಘಾತ ತಂದಿದೆ. ಅವರೊಬ್ಬ ಉತ್ತಮ ರೈಡರ್, ಅದ್ಭುತ ಮಹಿಳೆ, ಸದಾ ಹಸನ್ಮುಖಿ ಎಂದು ನಗರದ ಬೈಕ್ ಸವಾರರು ವೀನು ಪಾಲಿವಾಲ್ ರನ್ನು ಸ್ಮರಿಸಿದ್ದಾರೆ.

ನಗರದ ಬೈಕ್ ಸವಾರ 48 ವರ್ಷದ ಮಿಹಾರ್ ಶಾ ವೀನು ಪಾಲಿವಾಲ್ ರನ್ನು ಹತ್ತಿರದಿಂದ ಬಲ್ಲೆ. ರಕ್ಷಣಾತ್ಮಕ ಗೇರ್ ಮತ್ತು ಸುರಕ್ಷತೆಯ ಸಮರ್ಥಕರಾಗಿದ್ದ ವೀನು ಅವರು ಜವಾಬ್ದಾರಿಯುವ ಸವಾರರಾಗಿದ್ದರು. ಅವರ ಸಾವು ಅತಿಯಾದ ನೋವನ್ನು ತಂದಿದೆ. ಓರ್ವ ಕುಟುಂಬ ಸದಸ್ಯೆಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ.

ರಾಜಸ್ಥಾನದ ಮೂಲದ ವೀನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ತಮ್ಮ ನೆಚ್ಚಿನ ಹಾರ್ಲೆ ಡೇವಿಡ್ ಸನ್ ಬೈಕ್ ಏರಿ ಹೊರಟ್ಟಿದ್ದರು. ಭೋಪಾಲ್ ನಿಂದ 100 ಕಿ.ಮೀ ದೂರ ಇವರು ಗ್ಯಾರಸ್ ಪುರ ಎಂಬಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಮೃತಪಟ್ಟಿದ್ದರು.

ಎರಡು ಮಕ್ಕಳ ತಾಯಿಯಾಗಿದ್ದ ವೀನು ರಾಷ್ಟ್ರವ್ಯಾಪ್ತಿ ಸಂಚರಿಸಿ ಬೈಕ್ ಸವಾರಿ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸುವ ಕನಸ್ಸು ಕಂಡಿದ್ದರು. ಇತ್ತೀಚೆಗಷ್ಟೇ ಆಕೆಗೆ ಲೇಡಿ ಆಫ್ ಹಾರ್ಲೆ 2016 ಎಂದು ಪ್ರಶಸ್ತಿ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com