ತಿರುವನಂತಪುರಂ: ಕೇರಳದಲ್ಲಿ ಕೊಲ್ಲಂನಲ್ಲಿ ಅಗ್ನಿ ದುರಂತ ಸಂಭವಿಸಿದ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದನ್ನು ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸಮರ್ಥಿಸಿಕೊಂಡಿದ್ದಾರೆ.
ಅಗ್ನಿ ಅನಾಹುತ ಸಂಭವಿಸಿದ ಪ್ರದೇಶಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಸಂತ್ರಸ್ತರಿಗೆ ದೊಡ್ಡ ಪರಿಹಾರ ಸಿಕ್ಕಿದೆ. ರಾಷ್ಟ್ರೀಯ ನಾಯಕರು ಕೇರಳಕ್ಕೆ ಭೇಟಿ ನೀಡಿ ಸಲಹೆ ಮತ್ತು ಸಹಾಯ ಮಾಡಿರುವುದೇ ದೊಡ್ಡ ವಿಷಯ ಎಂದು ಚಾಂಡಿ ಹೇಳಿದ್ದಾರೆ.
ಕೇರಳದಲ್ಲಿ ಕೊಲ್ಲಂನಲ್ಲಿರುವ ಪುತ್ತಿಂಗಲ್ ದೇವಾಲಯದ ಬಳಿ ಪಟಾಕಿ ಸ್ಫೋಟಗೊಂಡು ಅಗ್ನಿ ದುರಂತ ಸಂಭವಿಸಿತ್ತು. ಈ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಆದರೆ ಇದಕ್ಕೆ ಕೇರಳ ಪೋಲಿಸ್ ಮಹಾನಿರ್ದೇಶಕ ಟಿ.ಪಿ. ಸೇನ್'ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.