
ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಬಿಸಿಲ ಬೇಗೆ ಮುಂದುವರಿದಿದೆ. ತಾಪಮಾನ 40 ಡಿಗ್ರಿಯಿಂದ 45 ಡಿಗ್ರಿವರೆಗೆ ಏರಿದೆ.
ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶದ ಪ್ರಕಾರ ತೆಲಂಗಾಣ ರಾಜ್ಯದ ಹಲವು ಪ್ರದೇಶಗಳಲ್ಲಿ ಗರಿಷ್ಟ ಉಷ್ಣಾಂಶ ದಾಖಲಾಗಿದೆ. ಮುಂದಿನ 5 ದಿನಗಳಲ್ಲಿ ಇದೇ ರೀತಿ ತಾಪಮಾನ ಏರಲಿದ್ದು, ಉಷ್ಣಾಂಶ ಕೂಡ ಹೆಚ್ಚಲಿದೆ.
ನಿಜಾಮಾಬಾದ್ ನಲ್ಲಿ 44 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ತಾಪಮಾನ ಏರಿಕೆ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಶಾಲೆಗಳಿಗೆ ಬೇಸಿಗೆ ರಜೆ ಅವಧಿಯನ್ನು ವಿಸ್ತರಿಸಿದೆ. ಎಲ್ಲಾ ಜಿಲ್ಲೆಗಳಿಂದ ತಾಪಮಾನದ ಮಾಹಿತಿಯನ್ನು ಕ್ರೂಡಿಕರಿಸಲಾಗುತ್ತಿದೆ. ಇನ್ನೂ ಇದುವರೆಗೂ ಬಿಸಿಲ ಬೇಗೆಗೆ 35 ಮಂದಿ ಸಾವನ್ನಪ್ಪಿದ್ದಾರೆ.
Advertisement