ದೆಹಲಿಯಲ್ಲಿ ಸಮ-ಬೆಸ ಜಾರಿ ಬೆನ್ನಲ್ಲೇ ಆಟೋ, ಟ್ಯಾಕ್ಸಿ ಸಂಘಟನೆಗಳಿಂದ ಬಂದ್ ಗೆ ಕರೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದಿಂದ ಎರಡನೇ ಹಂತ ಸಮ-ಬೆಸ ಯೋಜನೆ ಜಾರಿಗೊಂಡಿದ್ದು, ಇದರ ಬೆನ್ನಲ್ಲೇ ಆಟೋ ಹಾಗೂ ಟ್ಯಾಕ್ಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದಿಂದ ಎರಡನೇ ಹಂತ ಸಮ-ಬೆಸ ಯೋಜನೆ ಜಾರಿಗೊಂಡಿದ್ದು, ಇದರ ಬೆನ್ನಲ್ಲೇ ಆಟೋ ಹಾಗೂ ಟ್ಯಾಕ್ಸಿ ಸಂಘಟನೆಗಳು ಸೋಮವಾರ ಬಂದ್ ಗೆ ಕರೆ ನೀಡಿವೆ. ಇದರಿಂದ ದೆಹಲಿ ನಾಗರಿಕರು ತೀವ್ರ ತೊಂದರೆ ಅನುಭವಿಸುವ ಸಾಧ್ಯತೆ ಇದೆ.
ಆಪ್ ಆಧಾರಿತ ಕ್ಯಾಬ್ ಸೇವೆಯನ್ನು ವಿರೋಧಿಸಿ ನಾವು ಸೋಮವಾರ ಬಂದ್ ಕರೆ ನೀಡಿದ್ದು, ಅಂದು ಆಟೋ ಹಾಗೂ ಕಪ್ಪು-ಹಳದಿ ಬಣ್ಣದ ಯಾವುದೇ ಟ್ಯಾಕ್ಸಿಗಳು ರಸ್ತೆಗೆ ಇಳಿಯುವುದಿಲ್ಲ ಎಂದು ದೆಹಲಿ ಆಟೋ ರಿಕ್ಷಾ ಸಂಘ ಹಾಗೂ ದೆಹಲಿ ಪ್ರದೇಶ ಟ್ಯಾಕ್ಸಿ ಸಂಘಟನೆಗಳ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸೋನಿ ಅವರು ಹೇಳಿದ್ದಾರೆ.
ದೆಹಲಿ ಸರ್ಕಾರ ಇದುವರೆಗೂ 10 ಸಾವಿರ ಆಟೋ ರಿಕ್ಷಾಗಳಿಗೆ ಅನುಮತಿ ನೀಡಿಲ್ಲ. ಅನುಮತಿ ನೀಡುವಲ್ಲಿ ಅಕ್ರಮ ನಡೆದಿದೆ ಎಂದು ಅದನ್ನು ರದ್ದುಗೊಳಿಸಲಾಗಿದೆ. ಆದರೆ ಆಪ್ ಸರ್ಕಾರ ಒಂದು ಕಡೆ ಸಾರ್ವಜನಿಕ ಸೇವೆಯನ್ನು ಬಲಪಡಿಸಬೇಕು ಎಂದು ಹೇಳುತ್ತಿದೆ. ಮತ್ತೊಂದು ಕಡೆ ಆಟೋ ರಿಕ್ಷಾಗಳಿಗೆ ಅನುಮತಿ ನೀಡುತ್ತಿಲ್ಲ ಎಂದು ಸೋನಿ ತಿಳಿಸಿದ್ದಾರೆ.
ಆಪ್ ಆಧಾರಿತ ಟ್ಯಾಕ್ಸಿ ಸೇವೆ ಕಾನೂನು ಬಾಹಿರ ಎಂದಿರುವ ಸೋನಿ, ಅವರು ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ರಾಜೇಂದ್ರ ಸೋನಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com