ಲಖನೌದಲ್ಲಿ ಮೆಟ್ರೋ ಪಿಲ್ಲರ್ ಕುಸಿತ: ಇಬ್ಬರಿಗೆ ಗಾಯ

ಇಲ್ಲಿನ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ವೊಂದು ಕುಸಿದ ಪರಿಣಾಮ ಸ್ಥಳದಲ್ಲಿದ್ದ 2 ಜನರಿಗೆ ಗಾಯವಾಗಿರುವ ಘಟನೆ ಅಲಾಂಬಾಘ್ ನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ...
ಲಖನೌದಲ್ಲಿ ಮೆಟ್ರೋ ಪಿಲ್ಲರ್ ಕುಸಿತ: ಇಬ್ಬರಿಗೆ ಗಾಯ
ಲಖನೌದಲ್ಲಿ ಮೆಟ್ರೋ ಪಿಲ್ಲರ್ ಕುಸಿತ: ಇಬ್ಬರಿಗೆ ಗಾಯ

ಲಖನೌ: ಇಲ್ಲಿನ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ವೊಂದು ಕುಸಿದ ಪರಿಣಾಮ ಸ್ಥಳದಲ್ಲಿದ್ದ 2 ಜನರಿಗೆ ಗಾಯವಾಗಿರುವ ಘಟನೆ ಅಲಾಂಬಾಘ್ ನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಇಂದು ಬೆಳಿಗ್ಗೆ ಘಟನೆ ನಡೆದಿದ್ದು, ಘಟನೆಗೆ ಈ ವರೆಗೂ ಕಾರಣಗಳು ತಿಳಿದುಬಂದಿದೆ. ಇನ್ನು ಸಾವು ಸಂಭವಿಸಿರುವ ವರದಿಗಳಾಗಿಲ್ಲ. ಇದೀಗ ಸ್ಥಳಕ್ಕಾಗಿಮಿಸಿರುವ ಇಂಜಿನಿಯರ್ ಗಳು ಹಾಗೂ ಇನ್ನಿತರೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇನ್ನು ಘಟನೆ ಸಂಬಂಧ ಮಾತನಾಡಿರುವ ಪ್ರತ್ಯಕ್ಷದರ್ಶಿಯೊಬ್ಬರು, ಘಟನೆ ನಡೆದ ಸಂದರ್ಭದಲ್ಲಿ ನಾನು ಆಟೋ ಓಡಿಸಿಕೊಂಡು ಹೋಗುತ್ತಿದ್ದೆ. ಈ ವೇಳೆ ಇದ್ದಕ್ಕಿದ್ದಂತೆ ಮೆಟ್ರೋದ ಪಿಲ್ಲರ್ ಆಟೋ ಮೇಲೆ ಬಿದ್ದಿತು. ಭಾನುವಾರವಾದ್ದರಿಂದ ಸ್ಥಳದಲ್ಲಿ ಹೆಚ್ಚು ಜನರಿರಲಿಲ್ಲ. ಇಲ್ಲದಿದ್ದರೆ ಸಾಕಷ್ಟು ಮಂದಿ ಗಾಯಗೊಳ್ಳುತ್ತಿದ್ದರೆಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com