10 ವರ್ಷದ ಬಾಲೆಗೆ ಧನ್ಯವಾದ ಹೇಳಿ ಪತ್ರ ಬರೆದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಕಾನ್ಪುರ ನಗರದ 10 ವರ್ಷದ ಬಾಲಕಿಯೊಬ್ಬಳಿಗೆ ಧನ್ಯವಾದ ಹೇಳಿ ಪತ್ರವೊಂದನ್ನು ಬರೆದಿದ್ದಾರೆ...
ಮೋದಿಯವರಿಂದ ಧನ್ಯವಾದ ಪತ್ರ ಪಡೆದ ಬಾಲಕಿ ಅದಿತಿ (ಫೋಟೋ ಕೃಪೆ: ಎಎನ್ಐ)
ಮೋದಿಯವರಿಂದ ಧನ್ಯವಾದ ಪತ್ರ ಪಡೆದ ಬಾಲಕಿ ಅದಿತಿ (ಫೋಟೋ ಕೃಪೆ: ಎಎನ್ಐ)

ಕಾನ್ಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಕಾನ್ಪುರ ನಗರದ 10 ವರ್ಷದ ಬಾಲಕಿಯೊಬ್ಬಳಿಗೆ ಧನ್ಯವಾದ ಹೇಳಿ ಪತ್ರವೊಂದನ್ನು ಬರೆದಿದ್ದಾರೆ.

10 ವರ್ಷದ ಅದಿತಿ ಮೋದಿಯವರಿಂದ ಧನ್ಯವಾದ ಪತ್ರ ಪಡೆದ ಬಾಲಕಿಯಾಗಿದ್ದು, ಈಕೆ ಹಲವು ದಿನಗಳಿಂದಲೂ ಪ್ರಧಾನಿ ಮೋದಿಯವರು ದೇಶದ ಜನತೆಗೆ ಹೊರ ತರುವ ಯೋಜನೆಗಳ ಕುರಿತಂತೆ ಪ್ರಶಂಸೆ ಹಾಗೂ ಸಲಹೆಗಳನ್ನು ನೀಡಿ ಪತ್ರಗಳನ್ನು ಬರೆದಿದ್ದಾಳೆ. ಇದರಂತೆ ಬಾಲಕಿಯ ಪ್ರತಿಕ್ರಿಯೆ ನೋಡಿ ಮೋದಿಯವರು ಬಾಲಕಿಗೆ ಧನ್ಯವಾದ ಪತ್ರವೊಂದನ್ನು ಬರೆದಿದ್ದಾರೆ.

ಇನ್ನು ಪತ್ರದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅದಿತಿ, ಮೋದಿಯವರು ಪ್ರತಿಕ್ರಿಯೆ ನೀಡುತ್ತಾರೆಂದು ನನಗೆ ನಂಬಿಕೆಯಿತ್ತು. ನನ್ನ ನಂಬಿಕೆಯಂತೆಯೇ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಮೋದಿಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಜಾರಿಗೆ ತರುವ ಯೋಜನೆಗಳ ಕುರಿತಂತೆ ಪತ್ರಗಳನ್ನು ಬರೆಯುತ್ತಿದ್ದೆ. ಪತ್ರದಲ್ಲಿ ಯೋಜನೆ ಜಾರಿಗೆ ತಂದಿದ್ದಕ್ಕೆ ಧನ್ಯವಾದ ಹಾಗೂ ಕೆಲವು ಸಲಹೆಗಳನ್ನು ತಿಳಿಸುತ್ತಿದ್ದೆ. ಇದರಂತೆ ಏಪ್ರಿಲ್. 11 ರಂದು ಮೋದಿಯವರಿಂದ ನನಗೆ ಧನ್ಯವಾದ ಪತ್ರ ಬಂದಿತು, ಮೋದಿಯವರು ಇದೇ ರೀತಿಯಲ್ಲಿ ತಮ್ಮ ಕಾರ್ಯವನ್ನು ಮುಂದುವರೆಸಬೇಕೆಂದು ಕೇಳಿಕೊಳ್ಳುತ್ತೇನೆಂದು ಹೇಳಿದ್ದಾಳೆ.

ಇನ್ನು ಅದಿತಿ ಬರವಣಿಗೆ ಕೌಶಲ್ಯ ಕುರಿತಂತೆ ಸ್ವತಃ ಆಕೆಯ ತಾಯಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದು, ಮಗಳಿಗೆ ಸರ್ಕಾರ ಕೆಲಸ ಹಾಗೂ ಯೋಜನೆಯ ಕುರಿತಂತೆ ಇಷ್ಟೆಲ್ಲಾ ತಿಳುವಳಿಕೆಯಿದೆ ಎಂಬುದು ತಿಳಿದಿರಲಿಲ್ಲ. ಮೋದಿಯವರು ಪ್ರತಿಕ್ರಿಯೆ ನೀಡುತ್ತಾರೆಂದು ನಾವು ನಿರೀಕ್ಷಿಸಿರಲಿಲ್ಲ. ಸರ್ಕಾರದ ಯೋಜನೆ ಕುರಿತಂತೆ ಪತ್ರದಲ್ಲಿ ತುಂಬಾ ಚೆನ್ನಾಗಿ ಬರೆದಿದ್ದಾಳೆಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com