ಅಗ್ನಿ ದುರಂತ ಸಂಭವಿಸಿದ ವಾರದ ನಂತರ ಬಾಗಿಲು ತೆರೆದ ಪುತ್ತಿಂಗಳ್ ದೇವಿ ದೇಗುಲ

ಅಗ್ನಿ ದುರಂತ ಸಂಭವಿಸಿದ ಆರು ದಿನಗಳ ನಂತರ ಕೇರಳದ ಕೊಲ್ಲಂ ಬಳಿಯಿರುವ ಪಾರವೂರ್ ಪುತ್ತಿಂಗಳ್ ದೇವಿ ದೇವಸ್ಥಾನದ ಬಾಗಿಲು ತೆರೆಯಲಾಗಿದೆ.
ಪುತ್ತಿಂಗಳ್ ದೇವಿ ದೇವಸ್ಥಾನ, ಕೇರಳ
ಪುತ್ತಿಂಗಳ್ ದೇವಿ ದೇವಸ್ಥಾನ, ಕೇರಳ

ಕೊಲ್ಲಂ: ಅಗ್ನಿ ದುರಂತ ಸಂಭವಿಸಿದ ಆರು ದಿನಗಳ ನಂತರ ಕೇರಳದ ಕೊಲ್ಲಂ ಬಳಿಯಿರುವ ಪಾರವೂರ್ ಪುತ್ತಿಂಗಳ್ ದೇವಿ ದೇವಸ್ಥಾನದ ಬಾಗಿಲು ತೆರೆಯಲಾಗಿದೆ.
ದೇವಾಲಯದ ಮುಖ್ಯ ಅರ್ಚಕ ಉನ್ನಿಕೃಷ್ಣನ್ ನಂಬೂದರಿ ಬೆಳಿಗ್ಗೆ 4 ಕ್ಕೆ ದೇವಾಲಯದ ಗರ್ಭಗುಡಿಯನ್ನು ತೆರೆದರು ಈ ನೂರಾರು ಭಕ್ತಾದಿಗಳು ನೆರೆದಿದ್ದರು. ಅಗ್ನಿ ದುರಂತ ಸಂಭವಿಸಿ 4 -5 ದಿನಗಳೇ ಕಳೆದರೂ ದೇವಾಲಯದ ಬಾಗಿಲನ್ನು ತೆರೆದಿರಲಿಲ್ಲ. ಆದರೆ ಪಟಾಕಿ ಹೊಡೆಯುವ ಆಚರಣೆಯ ನಂತರ ಏಳನೇ ದಿನವೇ ದೇವಾಲಯವನ್ನು ತೆರೆಯುವುದು  ಸಂಪ್ರದಾಯ ಆಗಿರುವುದರಿಂದ ಪಟಾಕಿ ಹೊಡೆಯುವ ಆಚರಣೆ ನಡೆದು 7 ದಿನಗಳ ನಂತರ ದೇವಾಲಯವನ್ನು ತೆರೆಯಲಾಗಿದೆ.
ಅಗ್ನಿ ದುರಂತ ಸಂಭವಿಸಿದ ನಂತರ 7 ನೇ ದಿನ ದೇವಾಲಯದ ಬಾಗಿಲನ್ನು ತೆರೆಯುವುದರ ಬಗ್ಗೆ ಸಾಕಷ್ಟು ಗೊಂದಲಗಳಿತ್ತಾದರೂ, ದೇವಾಲಯದ ಬಾಗಿಲನ್ನು ತೆರೆಯಲು ಆಡಳಿತ ಮಂಡಳಿ ಒಮ್ಮತದ ತೀರ್ಮಾನ ಕೈಗೊಂಡ ಪರಿಣಾಮ ಇಂದು ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ.  
ಒಂದಷ್ಟು ಜನರು ಶನಿವಾರದಿಂದೇ ದೇವಾಲಯವನ್ನು ತೆರೆಯಬೇಕೆಂದು ಒತ್ತಾಯ ಮಾಡಿದ್ದರು. ಆದರೆ ಮತ್ತೆ ಕೆಲವು ಜನರು ಶುದ್ಧೀಕರಣ ಕಾರ್ಯ ನಡೆದ ಬಳಿಕವಷ್ಟೇ ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ಪ್ರಾರಂಭಿಸಬೇಕು ಎಂದು ಪಟ್ಟು ಹಿಡಿದ್ದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com