ಆಶಿಯಾನಾ ಸಾಮೂಹಿಕ ಅತ್ಯಾಚಾರ ಪ್ರಕರಣ: ಗೌರವ್ ಶುಕ್ಲಾಗೆ 10 ವರ್ಷ ಜೈಲು ಶಿಕ್ಷೆ

11 ವರ್ಷಗಳ ಹಿಂದೆ ಆಶಿಯಾನಾದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರವೊಂದರ ತೀರ್ಪು ಸೋಮವಾರ ಹೊರಬಿದ್ದಿದ್ದು, ಅತ್ಯಾಚಾರಿ ಗೌರವ್ ಶುಕ್ಲಾಗೆ 10 ಜೈಲು...
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)

ಲಖನೌ: 11 ವರ್ಷಗಳ ಹಿಂದೆ ಆಶಿಯಾನಾದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರವೊಂದರ ತೀರ್ಪು ಸೋಮವಾರ ಹೊರಬಿದ್ದಿದ್ದು, ಅತ್ಯಾಚಾರಿ ಗೌರವ್ ಶುಕ್ಲಾಗೆ 10 ಜೈಲು ಶಿಕ್ಷೆಯಾಗಿರುವುದಾಗಿ ತಿಳಿದುಬಂದಿದೆ.

2005ರ ಮೇ.2 ರಂದು ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಸಹೋದರನೊಂದಿಗೆ ಬರುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಆಕೆಯನ್ನು ಅಪಹಿರಿಸಿ ಕಾರಿನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು. ಈ ಪ್ರಕರಣದಲ್ಲಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಪ್ರಭಾವಿ ನಾಯಕರೊಬ್ಬರ ಸಂಬಂಧಿ ಗೌರವ್ ಶುಕ್ಲಾ ಪ್ರಮುಖ ಆರೋಪಿಯಾಗಿದ್ದ. ಅತ್ಯಾಚಾರ ಪ್ರಕರಣ ನಡೆದಾಗ ಗೌರವ್ ಶುಕ್ಲಾ ಅವರು ಅಪ್ರಾಪ್ತ ವಯಸ್ಕನಾಗಿದ್ದ ಕಾರಣ ಸ್ನೇಹಿತರ ಜೊತೆ ಬಂಧಿನಕ್ಕೊಳಗಾಗಿ ಬಾಲ ಮಂದಿರಕ್ಕೆ ರವಾನಿಸಲಾಗಿತ್ತು.

ನಂತರ ಆರೋಪಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು, ವಿಚಾರಣೆ ನಡೆಸಿದ್ದ ನ್ಯಾಯಾಲಯವು ಮತ್ತೆ ಕೆಳೆ ನ್ಯಾಯಾಲಯಕ್ಕೆ ಕಳುಹಿಸಿತ್ತು. ನಂತರ ತ್ವರಿಗತಗತಿ ನ್ಯಾಯಾಲಯವು ಏಪ್ರಿಲ್ 12 ರಂದು ವಿಚಾರಣೆ ನಡೆಸಿ ಏ.18 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿತ್ತು. ಇದರಂತೆ ಇಂದು ಅತ್ಯಾಚಾರಿಗಳಿಗೆ ಶಿಕ್ಷೆಯಾಗಿದ್ದು, ಗೌರವ್ ಶುಕ್ಲಾಗೆ 10 ವರ್ಷಗಳ ಸೆರೆವಾಸವನ್ನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com