ಆತ್ಮ ವಿಶ್ವಾಸದಿಂದ ಹೆಜ್ಜೆಯಿಟ್ಟು ರ್ಯಾಂಪ್ ವಾಕ್ ಮಾಡಿದ ತೃತೀಯ ಲಿಂಗಿ

ಇದೀಗ ಇಂಡಿಯಾ ರನ್‌ವೇ ವೀಕ್ 2016 ಫ್ಯಾಷನ್ ಶೋನಲ್ಲಿ ತೃತೀಯ ಲಿಂಗಿಯೊಬ್ಬರು ರ್ಯಾಂಪ್ ವಾಕ್ ಮಾಡಿ ತಾವು ಯಾರಿಗೂ ಕಮ್ಮಿ ಇಲ್ಲ ಎಂದು...
ಲಕ್ಷ್ಮಿ ನಾರಾಯಣ್ ತ್ರಿಪಾಠಿ
ಲಕ್ಷ್ಮಿ ನಾರಾಯಣ್ ತ್ರಿಪಾಠಿ
Updated on: 
ನವದೆಹಲಿ:  ಸಮಾಜ ಎಷ್ಟೇ ಬದಲಾದರೂ ತೃತೀಯ ಲಿಂಗಿಗಳತ್ತ ಜನರ ಭಾವನೆಗಳು ಅಷ್ಟೊಂದು ಕ್ಷಿಪ್ರಗತಿಯಲ್ಲಿ ಬದಲಾವಣೆಯನ್ನು ಕಂಡುಕೊಂಡಿಲ್ಲ. ಅತ್ತ ಹೆಣ್ಣೂ ಅಲ್ಲದ, ಇತ್ತ ಗಂಡೂ ಅಲ್ಲದ ಈ ತೃತೀಯ ಲಿಂಗಿ ಅಥವಾ ಟ್ರಾನ್ಸ್‌ಜೆಂಡರ್‌ಗಳನ್ನು ನಮ್ಮಂತೆಯೇ ಮನುಷ್ಯರು ಎಂದು ನೋಡದವರು ಬಹಳಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಆದರೆ ಸಮಾಜದ ಕುಹಕಗಳನ್ನೆಲ್ಲಾ ಬದಿಗೊತ್ತಿ ಸಾಧನೆ ಮಾಡಿದ ತೃತೀಯ ಲಿಂಗಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ.
ಇದೀಗ ಇಂಡಿಯಾ ರನ್‌ವೇ ವೀಕ್ 2016 ಫ್ಯಾಷನ್  ಶೋನಲ್ಲಿ ತೃತೀಯ ಲಿಂಗಿಯೊಬ್ಬರು ರ್ಯಾಂಪ್ ವಾಕ್ ಮಾಡಿ ತಾವು ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ತೃತೀಯ ಲಿಂಗಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಾರ್ಯಕರ್ತೆ  ಲಕ್ಷ್ಮಿ ನಾರಾಯಣ್ ತ್ರಿಪಾಠಿ, ನಟಿ ಮಂದಿರಾ ಬೇಡಿ ಜತೆ ರ್ಯಾಂಪ್ ವಾಕ್ ಮಾಡಿದ್ದಾರೆ. 
ಜ್ಯುವೆಲ್ಲರಿ ಡಿಸೈನರ್ ಆಕಾಶ್ ಅಗ್ರವಾಲ್ ಅವರ ವಿನ್ಯಾಸಗಳನ್ನು ಪ್ರದರ್ಶಿಸುವುದಕ್ಕಾಗಿ ಲಕ್ಷ್ಮಿ ರ್ಯಾಂಪ್‌ನಲ್ಲಿ ಆತ್ಮ ವಿಶ್ವಾಸದಿಂದ ಹೆಜ್ಜೆ ಹಾಕಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com