ಅಸ್ಸಾಂ ನಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಪಡೆಯಲಿದೆ: ತರುಣ್ ಗೊಗೊಯ್

ಅಸ್ಸಾಂ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಗೆ ಬಹುಮತ ದೊರೆಯಲಿದೆ ಎಂದು ಅಸ್ಸಾಂ ಸಿಎಂ ತರುಣ್ ಗೊಗೊಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತರುಣ್ ಗೊಗೊಯ್
ತರುಣ್ ಗೊಗೊಯ್

ಅಸ್ಸಾಂ: ಅಸ್ಸಾಂ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಗೆ ಬಹುಮತ ದೊರೆಯಲಿದೆ ಎಂದು ಅಸ್ಸಾಂ ಸಿಎಂ ತರುಣ್ ಗೊಗೊಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಚುನಾವಣಾ ಪ್ರಚಾರದಲ್ಲಿ ಕಾರ್ಯಕರ್ತರ ಕಠಿಣ ಶ್ರಮಕ್ಕೆ ಧನ್ಯವಾದ ತಿಳಿಸಿರುವ ಸಿಎಂ ಗೊಗೊಯ್, ತಾವು ತಿತಾಬೋರ್ ನ ಶಾಸಕಾರಾಗಿ ಮತ್ತೆ ಆಯ್ಕೆಗೊಂಡು, ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೇರೆ ಪಕ್ಷಗಳ ಸಹಾಯವಿಲ್ಲದೆ ಅಸ್ಸಾಂ ನಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ, ಏ.೪ ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕಡಿಮೆ ಸ್ಥಾನಗಳು ಸಿಗಬಹುದು ಆದರೆ ಏ.11 ರಂದು ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದೇವೆ ಎಂದು ಗೊಗೊಯ್ ತಿಳಿಸಿದ್ದಾರೆ.
2001ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೇ ಅಸ್ಸಾಂ ಅಭಿವೃದ್ಧಿ ಕಂಡಿದೆ.ಅಸ್ಸಾಂ ನ ಚಳುವಳಿಯ ಸಂದರ್ಭದಲ್ಲಿ ಎಜಿಪಿ ಪಕ್ಷದ ನಾಯಕರು ಆರ್ ಎಸ್ ಎಸ್ ನೊಂದಿಗೆ ಸಂಪರ್ಕ ಹೊಂದಿದ್ದರು, ಈ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಎಜಿಪಿ ಆರ್ ಎಸ್ ಎಸ್ ನೊಂದಿಗೆ ಸಂಪರ್ಕ ಹೊಂದಿರುವುದನ್ನು ಸ್ಪಷ್ಟಪಡಿಸಿದೆ ಎಂದು ಗೊಗೊಯ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com