ಬಡವರಿಂದ ಮಾತಾ ವೈಷ್ಣೋದೇವಿ ವಿವಿ ಸ್ಥಾಪನೆ: ಪ್ರಧಾನಿ ಮೋದಿ

ಬಡವರು ಹಾಗೂ ಯಾತ್ರಾರ್ಥಿಗಳ ಅನುದಾನದ ಮೂಲಕ ನಡೆಯುತ್ತಿರುವ ಏಕೈಕ ವಿಶ್ವವಿದ್ಯಾಲಯವೆಂದರೆ ಅದು, ಶ್ರೀ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯವೆಂದು...
ಶ್ರೀ ಮಾತಾ ವೈಷ್ಣೋ ದೇವಿ ವಿವಿಯ ಘಟಿಕೋತ್ಸವದಲ್ಲಿ ಮಾತನಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ
ಶ್ರೀ ಮಾತಾ ವೈಷ್ಣೋ ದೇವಿ ವಿವಿಯ ಘಟಿಕೋತ್ಸವದಲ್ಲಿ ಮಾತನಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ
Updated on

ಜಮ್ಮು: ಬಡವರು ಹಾಗೂ ಯಾತ್ರಾರ್ಥಿಗಳ ಅನುದಾನದ ಮೂಲಕ ನಡೆಯುತ್ತಿರುವ ಏಕೈಕ ವಿಶ್ವವಿದ್ಯಾಲಯವೆಂದರೆ ಅದು, ಶ್ರೀ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.  

ಒಂದು ದಿನದ ಭೇಟಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕತ್ರ ನಗರದಲ್ಲಿ ಶ್ರೀ ಮಾತಾ ವೈಷ್ಣೋ ದೇವಿ ಆಸ್ಪತ್ರೆಯನ್ನು ಉದ್ಘಾಟಿಸಿದರು.

ನಂತರ ಶ್ರೀ ಮಾತಾ ವೈಷ್ಣೋ ದೇವಿ ವಿವಿಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿರುವ ಸಾಕಷ್ಟು ವಿಶ್ವವಿದ್ಯಾಲಯಗಳನ್ನು ತೆರಿಗೆ ಕಟ್ಟುವವರ ಅನುದಾನದ ಮೂಲಕ ನಡೆಸಲಾಗುತ್ತಿದೆ. ಆದರೆ, ಬಡವರು ಹಾಗೂ ಯಾತ್ರಾರ್ಥಿಗಳ ಅನುದಾನದ ಮೂಲಕ ನಡೆಯುತ್ತಿರುವ ಏಕೈಕ ವಿಶ್ವವಿದ್ಯಾಲಯವೆಂದರೆ ಅದು, ಶ್ರೀ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯವೆಂದು ಹೇಳಿದ್ದಾರೆ.

ವಿವಿಯು ನೂರಾರು ಯಾತ್ರಾರ್ಥಿಗಳ ಕೊಡುಗೆಗಳಿಂದ ನಿರ್ಮಿಸಲಾಗಿದೆ. ಯಾತ್ರಾರ್ಥಿಗಳು ಬಹಳ ದೂರದಿಂದ ಇಲ್ಲಿಗೆ ಆಗಮಿಸುತ್ತಾರೆ. ನಾವು ಬಡವರಿಗಾಗಿ ಏನಾದರೂ ಮಾಡಬೇಕು. ಯಾಕೆಂದರೆ ಈ ವಿಶ್ವವಿದ್ಯಾಲಯ ನಿರ್ಮಿಸಲು ಬಡ ಯಾತ್ರಾರ್ಥಿಗಳು ಸಾಕಷ್ಟು ಕೊಡುಗೆ ನೀಡಿದ್ದಾರೆಂದು ಹೇಳಿದ್ದಾರೆ.

ಇದೇ ವೇಳೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿರುವ ಅವರು, ನಿಮ್ಮ ಪೋಷಕರು ನಿಮಗಾಗಿ ತಮ್ಮ ಸಂತೋಷವನ್ನು ತ್ಯಾಗ ಮಾಡಿದ್ದಾರೆ. ಬಾಲ್ಯದಲ್ಲಿ ಏನಾದರೂ ಮಾಡಬೇಕು ಎನ್ನುವ ಬಗ್ಗೆ ನೀವು ಕನಸು ಕಂಡಿರಬಹುದು. ಅದು ಇಂದು ಸಾಧ್ಯವಾಗದೆ ಇರಬಹುದು. ಆದರೆ, ಅದರ ಬಗ್ಗೆ ಚಿಂತಿಸಬೇಡಿ. ನೀವು ಏನು ಸಾಧಿಸಿದ್ದೀರಿ ಏನನ್ನು ಸಾಧಿಸಬೇಕೆಂಬುದರ ಬಗ್ಗೆ ಯೋಚಿಸಿ ಎಂದು ಹೇಳಿದ್ದಾರೆ.

ಭಾರತ ಪ್ರಗತಿಯ ಉತ್ತಂಗವನ್ನು ತಲುಪುವ ಪ್ರಯತ್ನದಲ್ಲಿದೆ. ಇಂತಹ ಯುವ ಜನಾಂಗವನ್ನಿಟ್ಟುಕೊಂಡು ಭಾರತ ಏನನ್ನೂ ಬೇಕಾದರೂ ಸಾಧಿಸಬಹುದು. ಈ ಶತಮಾನ ಜ್ಞಾನದ ಶತಮಾನವಾಗಿದೆ. ಜ್ಞಾನದ ಯುಗ ಕಂಡು ಬರುತ್ತಿದ್ದಂತೆ ವಿಶ್ವಕ್ಕೆ ಭಾರತ ದಾರಿ ತೋರಿಸುತ್ತದೆ ಎಂದು ಹೇಳಿದ್ದಾರೆ.

ಶ್ರೀ ಮಾತಾ ವೈಷ್ಣೋ ದೇವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ರು. 300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಸ್ಪತ್ರೆಯೊಂದಿಗೆ ಕತ್ರ ನಗರದಲ್ಲಿ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ನ್ನೂ ಮೋದಿಯವರು ಉದ್ಘಾಟಿಸಿದ್ದು, ಕತ್ರಕ್ಕೆ ಮೋದಿಯವರು ಈವರೆಗೂ 3 ಬಾರಿ ಭೇಟಿ ನೀಡಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಮ್ಮ ಕಾಶ್ಮೀರ ರಾಜ್ಯಪಾಲ ಎನ್ ಎನ್ ವೋಹ್ರಾ, ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com