
ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೋಹಿನ್ನೂರ್ ವಜ್ರವನ್ನು ದೇಶದ ಆಸ್ತಿ ಎಂದು ಹೇಳಿದ್ದು, ಅದನ್ನು ವಾಪಸ್ ತರಬೇಕು ಎಂದು ಒತ್ತಾಯಿಸಿದೆ.
ಕೊಹಿನ್ನೂರ್ ವಜ್ರವನ್ನು ಕದಿಯಲಾಗಿಲ್ಲ ಅಥವಾ ಬಲವಂತವಾಗಿ ಕೊಂಡೊಯ್ಯಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಆರ್ ಎಸ್ಎಸ್ ನ ನಾಯಕ ಇಂದ್ರೇಶ್ ಕುಮಾರ್ ಕೋಹಿನ್ನೂರ್ ವಜ್ರ ಭಾರತದ ಆಸ್ತಿ ಹಾಗೂ ಅದನ್ನು ವಾಪಸ್ ತರಬೇಕೆಂದು ಹೇಳಿದ್ದಾರೆ.
ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ದಾಖಲೆಗಳ ಪ್ರಕಾರ ಕೊಹಿನ್ನೂರ್ ವಜ್ರವನ್ನು ಕದಿಯಲಾಗಿಲ್ಲ ಅಥವಾ ಬಲವಂತವಾಗಿ ಕೊಂಡೊಯ್ಯಲಾಗಿಲ್ಲ. ಈ ಅಮೂಲ್ಯ ವಜ್ರವನ್ನು ಮಹಾರಾಜ ರಂಜಿತ್ ಸಿಂಗ್ ಈಸ್ಟ್ ಇಂಡಿಯಾ ಕಂಪನಿಗೆ ಉಡುಗೊರೆಯಾಗಿ ನೀಡಿದ್ದರು ಎಂದು ಸಾಲಿಸಿಟರ್ ಜನರಲ್ ಹೇಳಿದ್ದರು. ಆಲ್ ಇಂಡಿಯಾ ಹ್ಯೂಮನ್ ರೈಟ್ಸ್ ಆ್ಯಂಡ್ ಸೋಷ್ಯಲ್ ಜಸ್ಟೀಸ್ ಫ್ರಂಟ್ ಎಂಬ ಸಂಘಟನೆ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ
ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಈ ರೀತಿಯ ಉತ್ತರ ನೀಡಿದೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರದ ಹೇಳಿಕೆಗೆ ಆರ್ ಎಸ್ಎಸ್ ವ್ಯತಿರಿಕ್ತವಾದ ಹೇಳಿಕೆ ನೀಡಿದೆ.
Advertisement