25 ಲಕ್ಷ ಲೀಟರ್ ನೀರು ಹೊತ್ತು ಲಾತೂರ್ ತಲುಪಿದ ಜಲದೂತ ರೈಲು

ಹತ್ತು ವಾಗನ್ ನೀರಿನ ರೈಲು 9 ಟ್ರಿಪ್ ಗಳನ್ನು ಮುಗಿಸಿ ಇದೀಗ 50 ವಾಗನ್ ನೀರಿನ ರೈಲು 25 ಲಕ್ಷ ಲೀಟರ್ ನೀರನ್ನು...
25 ಲಕ್ಷ ಲೀಟರ್ ನೀರನ್ನು ಹೊತ್ತುಕೊಂಡು ಲಾತೂರ್ ನಗರ ತಲುಪಿದ ಜಲದೂತ ಎಕ್ಸ್ ಪ್ರೆಸ್
25 ಲಕ್ಷ ಲೀಟರ್ ನೀರನ್ನು ಹೊತ್ತುಕೊಂಡು ಲಾತೂರ್ ನಗರ ತಲುಪಿದ ಜಲದೂತ ಎಕ್ಸ್ ಪ್ರೆಸ್

ಮುಂಬೈ: ಹತ್ತು ವಾಗನ್ ನೀರಿನ ರೈಲು 9 ಟ್ರಿಪ್ ಗಳನ್ನು ಮುಗಿಸಿ ಇದೀಗ 50 ವಾಗನ್ ನೀರಿನ ರೈಲು 25 ಲಕ್ಷ ಲೀಟರ್ ನೀರನ್ನು ಹೊತ್ತುಕೊಂಡು ಬಿಸಿಲಿನಿಂದ ತೀವ್ರ ತತ್ತರಿಸಿ ಹೋಗಿರುವ ಲಾತೂರ್ ಗೆ ಬುಧವಾರ ಬಂದು ತಲುಪಿತು.

ಜಲದೂತ ಹೆಸರಿನ ರೈಲು ಪಶ್ಟಿಮ ಮಹಾರಾಷ್ಟ್ರದ ಮೀರಜ್ ನಿಂದ ಕಳೆದ ರಾತ್ರಿ 11 ಗಂಟೆಗೆ ಹೊರಟಿತು. ಇಲ್ಲಿಂದ ಲಾತೂರ್ ಗೆ 342 ಕಿಲೋ ಮೀಟರ್ ದೂರವಿದೆ. ಇಲ್ಲಿಯವರೆಗೆ 70 ಲಕ್ಷ ಲೀಟರ್ ನೀರನ್ನು ರೈಲು ಮೂಲಕ ಬರಗಾಲ ಪೀಡಿತ ಲಾತೂರ್ ಗೆ ತಲುಪಿಸಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ರೈಲು ಈ ಹಿಂದೆ ಒಂಭತ್ತು ಸಲ ನೀರನ್ನು ಸಾಗಿಸಿತ್ತು. ಪ್ರತಿಸಲ ಹೋಗುವಾಗ 5 ಲಕ್ಷ ಲೀಟರ್ ನೀರನ್ನು ಕೊಂಡೊಯ್ದಿದೆ. 50 ವಾಗನ್ ನೀರು ರೈಲನ್ನು ಲಾತೂರ್ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಭವ್ಯವಾಗಿ ಸ್ವಾಗತಿಸಲಾಯಿತು. ಕುಡಿಯುವ ನೀರಿಗೆ ಪರದಾಡುತ್ತಿರುವ ಲಾತೂರ್ ಜನರಿಗೆ ಈ ನೀರಿನಿಂದ ಬಹಳ ಉಪಕಾರವಾಗಲಿದೆ ಎಂದು ಲಾತೂರ್ ನಗರ ಮೇಯರ್ ಅಕ್ತರ್ ಮಿಸ್ತ್ರಿ ತಿಳಿಸಿದ್ದಾರೆ.

ಜಲದೂತ್ ರೈಲು ಮೊದಲ ಸಲ ಲಾತೂರ್ ನಗರಕ್ಕೆ ನೀರು ಹೊತ್ತೊಯ್ದಿದ್ದು ಏಪ್ರಿಲ್ 11ರಂದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com