ಅಂತರ್ಜಲ ಕುಸಿತ: 2050ರ ವೇಳೆಗೆ ನೀರನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು!

ಕೇಂದ್ರ ಅಂತರ್ಜಲ ಮಂಡಳಿಯ ಪ್ರಕಾರ 1951ರಲ್ಲಿ ಅಂತರ್ಜಲದ ಲಭ್ಯತೆ 14, 180 ಲೀಟರ್ ಆಗಿತ್ತು. 1991ರ ಹೊತ್ತಿಗೆ ಇದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಬರ ಪೀಡಿತ ಪ್ರದೇಶಗಳಲ್ಲಿ ಜನರು ನೀರಿಗಾಗಿ ಹಾಹಾಕಾರ ಮಾಡುವ ಪರಿಸ್ಥಿತಿ. ಭೂಗರ್ಭದಲ್ಲಿ ಜೀವಜಲ ಕಡಿಮೆಯಾಗುತ್ತಾ ಹೋಗಿದೆ. ಕೈ ಕೊಟ್ಟ ಮಳೆ, ಧಗೆಗೆ ಸುಡುತ್ತಿರುವ ಭೂಮಿ...ನೀರಿಲ್ಲದೆ ಬೆಳೆ ನಾಶವಾಗಿ ದೇಶದಲ್ಲಿ ರೈತ ಆತ್ಮಹತ್ಯೆ ಮಾಡುತ್ತಿದ್ದಾನೆ. ಹೀಗೆ ಮುಂದುವರಿದರೆ ಮುಂದೊಂದು ದಿನ ನಾವು ನೀರನ್ನೂ ವಿದೇಶದಿಂದ ಆಮದು ಮಾಡಬೇಕಾಗಿ ಬರಬಹುದು ಅಂತಾರೆ ತಜ್ಞರು. 
ಕೇಂದ್ರ ಅಂತರ್ಜಲ ಮಂಡಳಿಯ ಪ್ರಕಾರ 1951ರಲ್ಲಿ ಅಂತರ್ಜಲದ ಲಭ್ಯತೆ 14, 180 ಲೀಟರ್ ಆಗಿತ್ತು.  1991ರ ಹೊತ್ತಿಗೆ ಇದು ಅರ್ಧದಷ್ಟು ಕುಸಿಯಿತು. 2001 ರ ವೇಳೆಗೆ ಇದು 5,120 ಲೀಟರ್ ಆಗಿ ಬಿಟ್ಟಿದೆ.  ಹೀಗೆ ಮುಂದುವರಿದರೆ 2050ರ ವೇಳೆಗೆ ಇದು ಶೇ. 25 ಕ್ಕಿಂತಲೂ ಕೆಳಗೆ ಕುಸಿತ ಕಾಣಲಿದೆ ಎಂದು ಅಂತರ್ಜಲ ತಜ್ಞರು ಹೇಳಿದ್ದಾರೆ. ಹೀಗಾದರೆ ವಿದೇಶಗಳಿಂದ ನೀರನ್ನು ನಾವು ಆಮದು ಮಾಡಬೇಕಾದ ಪರಿಸ್ಥಿತಿ ಬಂದರೆ ಅಚ್ಚರಿ ಪಡಬೇಕಾಗಿಲ್ಲ.
ಮಳೆ ನೀರನ್ನು ಸರಿಯಾಗಿ ಸಂಗ್ರಹಿಸಿಡದೇ ಇರುವುದರಿಂದ ಅಂತರ್ಜಲ ಕುಸಿತಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ನಗರಾಭಿವೃದ್ಧಿ ಮತ್ತು ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಾಗಿರುವುದು ಕೂಡಾ ಈ ಪರಿಸ್ಥಿತಿಗೆ ಕಾರಣವಾಗಿದೆ. 
ಕೃಷಿ ಕಡಿಮೆಯಾಯಿತು, ಕೊಳ, ಕೆರೆಗಳು ಮುಚ್ಚಲ್ಪಟ್ಟವು. ಜನಸಂಖ್ಯೆ ಏರಿಕೆಯಾಗುತ್ತಿದ್ದಂತೆ ನದಿಗಳು ನಾಶವಾದವು. ಇದೆಲ್ಲವೂ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com