ಆಗಸ್ಟ್ ತಿಂಗಳವರೆಗೂ ಶುಭ ಮೂಹೂರ್ತವಿಲ್ಲ, ವಾರಂತ್ಯದಲ್ಲಿ ಮದುವೆ ಮಾಡಲು ಮುಗಿಬಿದ್ದ ಜನ

ಹೈದರಾಬಾದ್ ನಲ್ಲಿ ಈಗ ಸಾಲು ಸಾಲು ಮದುವೆಗಳು. ಬರುವ ಆಗಸ್ಟ್ ತಿಂಗಳ ವರೆಗೂ ವಿವಾಹಕ್ಕೆ ಶುಭ ಮೂಹೂರ್ತವಿಲ್ಲದ ಕಾರಣ ಇಂದು ಮತ್ತು ಭಾನುವಾರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಹೈದರಾಬಾದ್ ನಲ್ಲಿ ಈಗ ಸಾಲು ಸಾಲು ಮದುವೆಗಳು. ಬರುವ ಆಗಸ್ಟ್ ತಿಂಗಳ ವರೆಗೂ  ವಿವಾಹಕ್ಕೆ ಶುಭ ಮೂಹೂರ್ತವಿಲ್ಲದ ಕಾರಣ ಇಂದು ಮತ್ತು ಭಾನುವಾರ ಹೈದರಾಬಾದ್ ನಲ್ಲಿ ಸುಮಾರು 30 ಸಾವಿರ ಮದುವೆಗಳು ಜರುಗಲಿವೆ.

ಏಪ್ರಿಲ್ 22 ಮತ್ತು ಏಪ್ರಿಲ್ 24 ರಂದು ವಿವಾಹಕ್ಕೆ ಯೋಗ್ಯವಾದ ಮುಹೂರ್ಥವಿರುವುದರಿಂದ ಈ ಎರಡು ದಿನಗಳಲ್ಲಿ ಸಪ್ತಪದಿ ತುಳಿಯಲು ನವಜೋಡಿಗಳು ಕಾತುರರಾಗಿದ್ದಾರೆ.

ಏಪ್ರಿಲ್ 29 ರವರೆಗೆ ವಿವಾಹಕ್ಕೆ ಶುಭವೇಳೆ ಮುಗಿಯಲಿದ್ದು, ಮತ್ತೆ ಒಳ್ಳೆಯ ಮೂಹೂರ್ಥಕ್ಕೆ ಮುಂದಿನ ಆಗಸ್ಟ್ ತಿಂಗಳ ವರೆಗೂ ಕಾಯಬೇಕಾಗಿದೆ. ಹೀಗಾಗಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳ ವಿವಾಹವನ್ನು ಈ ವಾರಾಂತ್ಯದಲ್ಲಿ ನಡೆಸಲು ನಿರ್ಧರಿಸಿದ್ದಾರೆ ಎಂದು ಜ್ಯೋತಿಷಿ ಎಸ್ ವಿ ನಾಗನಾಥ್ ಹೇಳಿದ್ದಾರೆ.

ಒಳ್ಳೆಯ ಮೂಹೂರ್ತ, ಲಗ್ನದಲ್ಲಿ, ಹಾಗೂ ನಿರ್ಧರಿಸಿದ ಸಮಯದಲ್ಲೆ ಮದುವೆ ಮಾಡುವುದು ಹಿಂದೂಗಳ ಸಂಸ್ಕೃತಿಯಾಗಿದೆ, ವ್ಯಕ್ತಿಯ ಜೀವನಕ್ಕೆ ಮದುವೆ ಎಂಬುದು ಮಹತ್ತರ ಘಟ್ಟವಾಗಿರುವುದರಿಂದ ಶುಭವೇಳೆಯಲ್ಲಿ ಮದುವೆ ಮಾಡಲು ಹಿರಿಯರು ನಿಶ್ಚಯಿಸುತ್ತಾರೆ.

ಇಂದು ಹುಣ್ಣಿಮೆ ಜೊತೆಗೆ ಶುಕ್ರವಾರ ಆಗಿರುವುದರಿಂದ ಒಳ್ಳೆಯ ಮೂಹೂರ್ತವಿದ್ದು ಇಂದು ತಮ್ಮ ಮಗಳ ವಿವಾಹ ಮಾಡುತ್ತಿರುವುದಾಗಿ ಬಿ.ಶಂಕರ್ ರಾವ್ ಎಂಬುವರು ತಿಳಿಸಿದ್ದಾರೆ. ಹೈದರಾಬಾದ್ ನ ಸುತ್ತ ಮುತ್ತಲಿನ, ಛತ್ರ, ಹಾಲ್, ದೇವಸ್ಥಾನ ಸೇರಿದಂತೆ ಎಲ್ಲಾ ಪಾರ್ಟಿ ಹಾಲ್ ಗಳು ಮದುವೆಗೆ ಬುಕ್ ಆಗಿವೆ, ಇನ್ನೂ ಆಭರಣ, ಸೀರೆ, ಮುಂತಾದ ವಿವಾಹ ಸಂಬಂಧಿತ ವಸ್ತುಗಳ ಖರೀದಿಸುವ ಅಂಗಡಿಗಳಲ್ಲಿ ಜಾನಜಾತ್ರೆಯೇ ಸೇರಿದೆ. ಜ್ಯೋತಿಷಿಗಳು, ಅಡುಗೆಯವರು, ಡೆಕೋರೇಟರ್ಸ್, ವಿಡಿಯೋಗ್ರಾಫರ್ಸ್ ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.  


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com