ಚೆನ್ನೈನಲ್ಲಿ ಜಗತ್ತಿನ ಎರಡನೇ ಬೃಹತ್ ಅತಿವೇಗದ ರೈಲು ಮಾರ್ಗ ನಿರ್ಮಿಸಲು ಚೀನಾ ಆಸಕ್ತಿ

ಜಗತ್ತಿನಲ್ಲಿ ಎರಡನೇ ಬೃಹತ್ ಅತಿವೇಗದ ರೈಲು ಮಾರ್ಗವನ್ನು ಚೆನ್ನೈನಲ್ಲಿ ನಿರ್ಮಿಸಲು ಚೀನಾ ಆಸಕ್ತಿ ತೋರಿಸಿದೆ ಎಂದು ಸುದ್ದಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಜಗತ್ತಿನಲ್ಲಿ ಎರಡನೇ ಬೃಹತ್ ಅತಿವೇಗದ ರೈಲು ಮಾರ್ಗವನ್ನು  ಚೆನ್ನೈನಲ್ಲಿ ನಿರ್ಮಿಸಲು ಚೀನಾ ಆಸಕ್ತಿ ತೋರಿಸಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಜಗತ್ತಿನಲ್ಲಿ ಅತೀ ಹೆಚ್ಚು ಉದ್ದದ ಅತಿವೇಗದ ರೈಲು ಮಾರ್ಗ ನಿರ್ಮಿಸಿದ್ದ ಚೀನಾ ರೈಲ್ವೇ ಕಾರ್ಪರೇಷನ್ (ಸಿಆರ್‌ಸಿ) ಹೈ ಸ್ಪೀಡ್ ರೈಲ್ವೇ (ಎಚ್ ಎಸ್‌ಆರ್) ಭಾರತದಲ್ಲಿ ಈ ಯೋಜನೆ ಆರಂಭಿಸಲು ಆಸಕ್ತಿ ತೋರಿದೆ. 
ಚೆನ್ನೈನಿಂದ ನವದೆಹಲಿವರೆಗೆ 2,200 ಕಿಮೀ ಅತಿವೇಗ ರೈಲ್ವೇ ಮಾರ್ಗ ಮತ್ತು  1,200 ಕಿಮೀ ದೂರದ ನವದೆಹಲಿ ಮುಂಬೈ ರೈಲು ಮಾರ್ಗಕ್ಕಿರುವ ಯೋಜನೆಯನ್ನು ಹೆಚ್‌ಎಸ್‌ಆರ್ ಸಿದ್ಧಪಡಿಸಿದೆ ಎಂದು ಮಾಧ್ಯಮದ ವರದಿಯಲ್ಲಿ ಹೇಳಲಾಗಿದೆ. 
ಇದೀಗ ಪ್ರಸ್ತುತ ಯೋಜನೆಗೆ ಸಂಬಂಧಿಸಿದ ಅಧ್ಯಯನಗಳು ನಡೆಯುತ್ತಿವೆ ಎಂದು ಸಿಆರ್‌ಸಿ ಉಪ ಜನರಲ್ ಇಂಜಿನಿಯರ್ ಜಾವೋ ಗೌಟಾಂಗ್ ಹೇಳಿದ್ದಾರೆ. ಈ ಯೋಜನೆಯ ಬಗ್ಗೆ ನಮಗೆ ಉತ್ತಮ ನಿರೀಕ್ಷೆಗಳಿದ್ದು, ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಮುಂಬೈ ನಿಂದ ಅಹ್ಮದಾಬಾದ್ ವರೆಗಿರುವ 505 ಕಿಮೀ ಅತಿವೇಗ ರೈಲು ಮಾರ್ಗ ನಿರ್ಮಿಸುವುದಕ್ಕಾಗಿ ಜಪಾನ್ ಮುಂದೆ ಬಂದಿದೆ. ಈ ಯೋಜನೆಯ ಬೆನ್ನಲ್ಲೇ ಚೀನಾ ಈ ಹೊಸ ಯೋಜನೆಯೊಂದಿಗೆ ಭಾರತವನ್ನು ಸಮೀಪಿಸಿದೆ.
ಚೆನ್ನೈ ನವದೆಹಲಿ ಯೋಜನೆ ಕಾರ್ಯರೂಪಕ್ಕೆ ಬಂದರೆ ಅದು ಜಗತ್ತಿನ ಎರಡನೇ ಬೃಹತ್ ಅತಿವೇಗ ರೈಲು ಮಾರ್ಗವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com