ಗೋವಾ: ಶಿಕ್ಷಣ ಮಾಧ್ಯಮದ ಬಗ್ಗೆ ಬಿಜೆಪಿ ನಿಲುವು ಖಂಡಿಸಿದ ಆರೆಸ್ಸೆಸ್

ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರು ನಿಮ್ಮ ಬಾಗಿಲಿಗೆ ಬರದಂತೆ ನೋಡಿಕೊಳ್ಳಿ. ಶಾಲೆಯಲ್ಲಿ ಪ್ರಾದೇಶಿಕ ಭಾಷೆಯನ್ನೇ ಶಿಕ್ಷಣ...
ಆರೆಸ್ಸೆಸ್
ಆರೆಸ್ಸೆಸ್
ಪಣಜಿ: ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರು ನಿಮ್ಮ ಬಾಗಿಲಿಗೆ ಬರದಂತೆ ನೋಡಿಕೊಳ್ಳಿ. ಶಾಲೆಯಲ್ಲಿ ಪ್ರಾದೇಶಿಕ ಭಾಷೆಯನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿ 2012ರಲ್ಲಿ ಚುನಾವಣೆ ಗೆದ್ದಿದ್ದ ಬಿಜೆಪಿ ನಮ್ಮನ್ನು ಮೋಸ ಮಾಡಿದೆ ಎಂದು ಆರೆಸ್ಸೆಸ್ ಗೋವಾ ಮುಖ್ಯಸ್ಥ ಸುಭಾಶ್ ವೆಲಿಂಗರ್ ಹೇಳಿದ್ದಾರೆ. 
ಭಾರತೀಯ ಭಾಷಾ ಸುರಕ್ಷಾ ಮಂಚ್ (ಬಿಬಿಎಸ್‌ಎಂ)ನ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕೆಂದು ಹೇಳಿದ್ದಾರೆ. 
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ನಾಲ್ಕು ವರ್ಷಗಳ ಆಳ್ವಿಕೆ ನಡೆಸಿ ಶಾಲೆಗಳಲ್ಲಿ ಕೊಂಕಣಿ ಮತ್ತು ಮರಾಠಿ ಭಾಷೆಗಳನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಲು 12 ವಿಧದ ಯೋಜನೆಗಳನ್ನು ಆರಂಭಿಸಿತ್ತು. ಆದರೆ ಈ ಯೋಜನೆಗಳಿಗೆ ನಯಾ ಪೈಸೆ  ಕೂಡಾ ಖರ್ಚು ಮಾಡಲಿಲ್ಲ. ಅವರ ಘೋಷಣೆಗಳೆಲ್ಲಾ ಘೋಷಣೆಗಳಾಗಿಯೇ ಉಳಿದವು ಎಂದಿದ್ದಾರೆ. 
ಇನ್ಮುಂದೆ ನಾವು ಗೋವಾದವರು ಇಂಥಾ ಸುಳ್ಳುಗಳನ್ನು ನಂಬ ಬಾರದು. ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದರೆ ಅದಕ್ಕೆ ಬಿಜೆಪಿ ನಾಯಕರೇ ಕಾರಣ ಎಂದು ವೆಲಿಂಗರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com