ಸಾಹಸ ಮೆರೆದ ಲೆ.ಕ. ನಿರಂಜನ್ ಹೆಸರು ಶೌರ್ಯ ಪ್ರಶಸ್ತಿಗೆ ಶಿಫಾರಸು

ಪಠಾಮ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಘಟನೆ ವೇಳೆ ಸಾಹಸ ಮೆರೆದು ಹುತಾತ್ಮರಾಗಿದ್ದ ನಗರದ ಲೆ.ಕರ್ನಲ್ ನಿರಂಜನ್ ಅವರ ಹೆಸರನ್ನು ಶೌರ್ಯ ಪ್ರಶಸ್ತಿಗೆ...
ಲೆ.ಕರ್ನಲ್ ನಿರಂಜನ್
ಲೆ.ಕರ್ನಲ್ ನಿರಂಜನ್

ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಘಟನೆ ವೇಳೆ ಸಾಹಸ ಮೆರೆದು ಹುತಾತ್ಮರಾಗಿದ್ದ ನಗರದ ಲೆ.ಕರ್ನಲ್ ನಿರಂಜನ್ ಅವರ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಿರುವುದಾಗಿ ಎನ್ಎಸ್ ಜಿ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದ ಪಾಲಕ್ಕಾಡ್ ಮೂಲದ ನಿರಂಜನ್ ಅವರು ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿನ ನಿವಾಸಿಯಾಗಿದ್ದರು, ಎನ್ ಎಸ್ ಜಿಯ ಬಾಂಬ್ ನಿಷ್ಕ್ರಿಯ ದಳದಲ್ಲಿ ಕಾರ್ಯನಿರ್ವಹಸುತ್ತಿದ್ದ ನಿರಂಜನ್ ಅವರು,  ಜ.2 ರಂದು ವಾಯುನೆಲೆ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಭಯೋತ್ಪಾದಕನ ದೇಹದ ಮೇಲೆ ಇದ್ದ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸುವಾಗ ಬಾಂಬ್ ವೊಂದು ಸ್ಫೋಟಗೊಂಡು ನಿರಂಜನ್ ಹಾಗೂ ಮತ್ತಿಬ್ಬರು ಯೋಧರು ಹುತಾತ್ಮರಾಗಿದ್ದರು.

ಇದೀಗ ನಿರಂಜನ್ ಸೇರಿ ಮೂವರು ಯೋಧರ ಹೆಸರನ್ನು ಶೌರ್ಯ ಚಕ್ರ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಗೃಹ ಸಚಿವಾಲಯಕ್ಕೆ ರಾಷ್ಟ್ರೀಯ ಭದ್ರತಾ ದಳ (ಎನ್ ಎಸ್ ಜಿ) ಈ ಶಿಫಾರಸ್ಸು ಮಾಡಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com