ಸೈನಿಕರಿಗೆ ಬಂಪರ್ ಆಫರ್: ನವವಿವಾಹಿತರಿಗೆ ಪತ್ನಿ ಜೊತೆ ಇರಲು ಅವಕಾಶ

ಅಂತಾರಾಷ್ಟ್ರೀಯ ಗಡಿ ಕಾಯುವ ದೇಶದ ಯೋಧರಿಗೆ ಇಲ್ಲೊಂದು ಖುಷಿಯ ವಿಚಾರವಿದೆ. ಗಡಿ ಕಾಯುವ ನವವಿವಾಹಿತ ಯೋಧರು ಪತ್ನಿ ಜತೆ ಇರಲು ಬಿಎಸ್‌ಎಫ್‌ ...
ಬಿಎಸ್ ಎಫ್ ಯೋಧರು
ಬಿಎಸ್ ಎಫ್ ಯೋಧರು

ಜೈಸಲ್ಮೇರ್‌: ಅಂತಾರಾಷ್ಟ್ರೀಯ ಗಡಿ ಕಾಯುವ ದೇಶದ ಯೋಧರಿಗೆ ಇಲ್ಲೊಂದು ಖುಷಿಯ ವಿಚಾರವಿದೆ.  ಗಡಿ ಕಾಯುವ ನವವಿವಾಹಿತ ಯೋಧರು ಪತ್ನಿ ಜತೆ ಇರಲು ಬಿಎಸ್‌ಎಫ್‌ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ಈ ಸಂಬಂಧ ಮಾತನಾಡಿದ ಬಿಎಸ್‌ಎಫ್‌ ಡಿಜಿ ಕೆ.ಕೆ ಶರ್ಮ ಅಂತಾರಾಷ್ಟ್ರೀಯ ಗಡಿ ಕಾಯುವ ಯೋಧರಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸುವ ಜತೆಗೆ ಮನೆಯ ವಾತಾವರಣ ಕಲ್ಪಿಸುವ ಬಗ್ಗೆಯೂ ಬಿಎಸ್‌ಎಫ್‌ ಕೇಂದ್ರ ಕಚೇರಿಯಲ್ಲಿ ಚರ್ಚೆ ನಡೆಸಿರುವುದಾಗಿತಿಳಿಸಿದ್ದಾರೆ.

ಸೈನಿಕರು ವಿವಾಹವಾದ ಕೂಡಲೇ ವಾಪಸಾಗಿ ಕರ್ತವ್ಯಕ್ಕೆ ನಿಯೋಜನೆಗೊಳ್ಳುತ್ತಿರುವ ಬಗ್ಗೆ ಬಹಳ ದಿನಗಳಿಂದಲೂ ಅಸಮಾಧಾನ ಇತ್ತು. ಜೊತೆಗೆ ಕುಟುಂಬದಿಂದ ದೂರ ಇರುವ ನೋವು ಅವರ ಕೆಲಸದ ಮೇಲೆ ಅಡ್ಡಪರಿಣಾಮ ಬೀರುವುದು ಎಂದು ಹೇಳಿದ್ದಾರೆ.

ಹೊಸ ನಿಯಮ ಆರಂಭಿಕ ಹಂತದಲ್ಲಿದ್ದು, ಗಡಿ ಔಟ್‌ಪೋಸ್ಟ್‌ಗಳಲ್ಲಿರುವ ನವ ವಿವಾಹಿತ ಯೋಧರ ಜತೆ ಪತ್ನಿಯೂ ಒಂದು ವರ್ಷ ಇರಲು ಅವಕಾಶ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಅವರಿಗೆ ವಸತಿ ಸೌಕರ್ಯ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಕುಟುಂಬದ ಜತೆ ಇರುವುದರಿಂದ ಯೋಧರ ಕಾರ್ಯಕ್ಷತೆ ಹೆಚ್ಚುವುದು,' ಎಂದು ಬಿಎಸ್‌ಎಫ್‌ ಐಜಿ ಬಿ ಆರ್‌. ಮೇಘ್ವಾಲ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com