ಕಾಶ್ಮೀರದಲ್ಲಿ ಉಗ್ರರ ಹೆಸರಲ್ಲಿ ಕ್ರಿಕೆಟ್ ಟೂರ್ನಿ!

ಪಾಕಿಸ್ತಾನ ಉಗ್ರರ ಕಪಿ ಮುಷ್ಠಿಯಲ್ಲಿರುವ ಕಾಶ್ಮೀರದಲ್ಲಿ ಉಗ್ರರ ಹೆಸರಲ್ಲಿ ಕ್ರಿಕೆಟ್ ಟೂರ್ನಿಗಳು ಆಯೋಜನೆಗೊಂಡಿದ್ದು, ತಂಡಗಳಿಗೂ ಉಗ್ರ ಕಮಾಂಡರ್ ಗಳ ಹೆಸರುಗಳನ್ನು ಇಡಲಾಗಿದೆ ಎಂದು ವಿಚಾರ ತಿಳಿದುಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಪಾಕಿಸ್ತಾನ ಉಗ್ರರ ಕಪಿ ಮುಷ್ಠಿಯಲ್ಲಿರುವ ಕಾಶ್ಮೀರದಲ್ಲಿ ಉಗ್ರರ ಹೆಸರಲ್ಲಿ ಕ್ರಿಕೆಟ್ ಟೂರ್ನಿಗಳು ಆಯೋಜನೆಗೊಂಡಿದ್ದು, ತಂಡಗಳಿಗೂ ಉಗ್ರ ಕಮಾಂಡರ್ ಗಳ ಹೆಸರುಗಳನ್ನು  ಇಡಲಾಗಿದೆ ಎಂದು ವಿಚಾರ ತಿಳಿದುಬಂದಿದೆ.

ರಾಷ್ಟ್ರೀಯ ಆಂಗ್ಲ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಕಳೆದ ಭಾನುವಾರ ಟ್ರಾಲ್ ನಲ್ಲಿ ಮುಕ್ತಾಯವಾದ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಹೆಸರಿನ  ಮೂರು ತಂಡಗಳು ಪಾಲ್ಗೊಂಡಿದ್ದವು. ಬರ್ಹಾನ್ ಲಯನ್ಸ್, ಆಬಿದ್ ಖಲಂದರ್ ಮತ್ತು ಖಾಲಿದ್ ಆರ್ಯನ್ ಎಂಬ ಹೆಸರಿನ ಮೂರು ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.  ಹಿಜ್ಬುಲ್  ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬರ್ಹಾನ್ ಮುಜಾಫರ್ ವಾಣಿಯ ಸ್ಮರಣಾರ್ಥ ಈ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಸುಮಾರು 2 ತಿಂಗಳ ಕಾಲ ನಡೆದ ಈ ಟೂರ್ನಿಯಲ್ಲಿ 16 ತಂಡಗಳ ಪಾಲ್ಗೊಂಡಿದ್ದು, ಅವುಗಳಲ್ಲಿ ಮೂರು ತಂಡಗಳಿಗೆ ಉಗ್ರಗಾಮಿ ಕಮಾಂಡರ್ ಗಳ ಹೆಸರನ್ನಿಡಲಾಗಿತ್ತು ಎಂದು ವರದಿಯಲ್ಲಿ  ತಿಳಿಸಲಾಗಿದೆ. ಬರ್ಹಾನ್ ಜಮ್ಮು ಮತ್ತು ಕಾಶ್ಮೀರದಲ್ಲಿ ಕುಖ್ಯಾತ ಉಗ್ರನೆನಿಸಿಕೊಂಡಿದ್ದು, 2010ರಲ್ಲಿ ಆತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನು ಸೇರಿದ್ದ. ಕ್ರಿಕೆಟ್ ಅನ್ನು ಹೆಚ್ಚು  ಇಷ್ಟಪಡುತ್ತಿದ್ದ ಬರ್ಹಾನ್ ಹೆಸರಲ್ಲಿಯೇ ಆತನ ಬೆಂಬಲಿಗರು ಕ್ರಿಕೆಟ್ ತಂಡ ರಚನೆ ಮಾಡಿದ್ದಾರೆ. ಇನ್ನು ಬರ್ಹಾನ್ ನಂತೆಯೇ ಉಗ್ರ ಸಂಘಟನೆಯ ಇತರೆ ಮುಖಂಡರಾದ ಆಬಿದ್ ಖಾನ್ ಮತ್ತು  ಖಾಲಿದ್ ಆರ್ಯನ್ ಹೆಸರನ್ನು ಇತರೆ 2 ತಂಡಗಳಿಗೆ ಇಡಲಾಗಿದೆ ಎಂದು ತಿಳಿದುಬಂದಿದೆ.

ಆದರೆ ಸ್ಥಳೀಯ ಭದ್ರತಾ ಅಧಿಕಾರಿಗಳು ಮಾತ್ರ ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಇರುವುದು ಮತ್ತು ಸ್ಥಳೀಯ ರಾಜಕಾರಣಿಗಳು ಉಗ್ರರ ಬೆಂಬಲಕ್ಕೆ ನಿಂತಿರುವುದು ಇದಕ್ಕೆ ಕಾರಣ  ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com