ನವದೆಹಲಿ: ಖಾಸಗಿ ಶಾಲೆಗಳು ಶುಲ್ಕ ಏರಿಕೆ ಮಾಡಿದ್ದರೆ ಆ ಬಗ್ಗೆ ನನಗೆ ಲಿಖಿತ ದೂರು ಸಲ್ಲಿಸಿ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿದ್ಯಾರ್ಥಿಗಳ ಹೆತ್ತವರಿಗೆ ಹೇಳಿದ್ದಾರೆ.
ಶಾಲೆಗಳು ಶುಲ್ಕ ಏರಿಸಿದ್ದರೆ ಆ ಶಾಲೆಗಳ ವಿರುದ್ಧ ಕ್ರಮ ಕೊಳ್ಳಲಿದ್ದೇವೆ. ಶುಲ್ಕ ಏರಿಕೆಯ ವಿರುದ್ಧ ಧರಣಿ ಮಾಡುವ ಬದಲು ನನಗೆ ಲಿಖಿತ ದೂರು ನೀಡಿ ಎಂದು ಆಮ್ ಆದ್ಮಿ ಪಕ್ಷದ ನಾಯಕ ಬುಧವಾರ ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿನ ಖಾಸಗಿ ಶಾಲೆಗಳು ಶಾಲಾ ಶುಲ್ಕವನ್ನು ನಿರ್ಧರಿಸಬಹುದು. ಆದರೆ ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ ಹಣವನ್ನು ಶಾಲೆಯ ಅಭಿವೃದ್ಧಿಗೆ ಬಳಸಬೇಕೇ ವಿನಾ ಮೆರ್ಸಿಡಸ್ ಖರೀದಿಸಲು ವಿನಿಯೋಗಿಸಬಾರದು ಎಂದು ಸಿಸೋಡಿಯಾ ಹೇಳಿದ್ದಾರೆ.
ये स्कूल धरने से नहीं मानेंगे। पेरेंट्स से निवेदन है कि इनके खिलाफ निडर होकर लिखित शिकायत मुझे दें। मैं एक्शन लूंगा। https://t.co/26NMe7Z2xm