ಸೋನಿಯಾ, ಪ್ರಿಯಾಂಕಾರಲ್ಲಿ ಭಾರತೀಯತೆಯನ್ನು ನೋಡುತ್ತೇನೆ: ರಾಮ್ ದೇವ್

ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಮಗಳು ಪ್ರಿಯಾಂಕಾ ಗಾಂಧಿಯಲ್ಲಿ ಭಾರತೀಯತೆಯನ್ನು ಹೆಚ್ಚಾಗಿ ನೋಡುತ್ತೇನೆಂದು ಯೋಗ ಗುರು ಬಾಬಾ ರಾಮ್ ದೇವ್...
ಯೋಗ ಗುರು ಬಾಬಾ ರಾಮ್ ದೇವ್
ಯೋಗ ಗುರು ಬಾಬಾ ರಾಮ್ ದೇವ್

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಮಗಳು ಪ್ರಿಯಾಂಕಾ ಗಾಂಧಿಯಲ್ಲಿ ಭಾರತೀಯತೆಯನ್ನು ಹೆಚ್ಚಾಗಿ ನೋಡುತ್ತೇನೆಂದು ಯೋಗ ಗುರು ಬಾಬಾ ರಾಮ್ ದೇವ್ ಅವರು ಗುರುವಾರ ಹೇಳಿಕೊಂಡಿದ್ದಾರೆ.

ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸೋನಿಯಾ ಹಾಗೂ ಅವರ ಪುತ್ರಿ ಪ್ರಿಯಾಂಕಾ ಗಾಂಧಿಯಲ್ಲಿ ಭಾರತೀಯತೆಯನ್ನು ಹೆಚ್ಚಾಗಿ ಕಾಣುತ್ತೇನೆ. ಸೋನಿಯಾ ಅವರು ಕ್ಯಾಥೋಲಿಕ್ ಆಗಿದ್ದರೂ, ಅವರಲ್ಲಿರುವ ಭಾರತೀಯನ್ನು ನೋಡುತ್ತೇನೆ. ಸೋನಿಯಾರಲ್ಲಿ ಕೆಲವು ಸೈದ್ಧಾಂತಿಕ ವ್ಯತ್ಯಾಸಗಳಿವೆ. ಆದರೆ, ಇದು ಒಂದು ವೇಳೆ ಅವರ ಮಾರ್ಗದರ್ಶಕರು ತಪ್ಪಾಗಿ ಹೇಳಿಕೊಟ್ಟಿರುವುದರಿಂದಲೂ ಆಗಿರಬಹುದು ಎಂದು ಹೇಳಿದ್ದಾರೆ.

2014ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿದೆ ನಾನು ಮೊದಲೇ ಹೇಳಿದ್ದೆ. ಇದರಂತೆ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಇನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸಾಕಷ್ಟು ಅವಕಾಶಗಳಿವೆ. ರಾಹುಲ್ ಅವರು ಮತ್ತಷ್ಟು ಶಕ್ತಿಶಾಲಿಯಾಗಬೇಕಿದೆ. ಆಗ ಮಾತ್ರ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ ಸರಿಯಾದ ದಾರಿಯಲ್ಲಿ ಹೋಗಲು ಸಾಧ್ಯ ಎಂದು ಹೇಳಿದ್ದಾರೆ.

ಈ ಹಿಂದಷ್ಟೇ ಕಾಂಗ್ರೆಸ್ ನಾಯಕರು ಉತ್ತರಾಖಂಡ್ ರಾಜ್ಯದ ರಾಜಕೀಯ ಬಿಕ್ಕಟ್ಟಿಗೆ ಯೋಗ ಗುರು ಬಾಬಾ ರಾಮ್ ದೇವ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಂಟಿಯಾಗಿ ಸಂಚು ರೂಪಿಸಿದ್ದು, ಈ ಕಾರಣಕ್ಕೆ ರಾಜ್ಯದಲ್ಲಿ ಅಸ್ಥಿರತೆ ಉಂಟಾಗಿದೆ ಎಂದು ಆರೋಪಿಸಿತ್ತು.

ಈ ಆರೋಪವನ್ನು ತಳ್ಳಿಹಾಕಿದ್ದ ರಾಮ್ ದೇವ್ ಅವರು, ಬಂಡಾಯ ಕಾಂಗ್ರೆಸ್ ಶಾಸಕರೊಂದಿಗೆ ನಾನು ಯಾವುದೇ ಸಂಪರ್ಕವನ್ನೂ ಹೊಂದಿಲ್ಲ. ರಾಜಕೀಯ ಕೂಡ ನನಗೆ ಸರಿ ಬರುವುದಿಲ್ಲ. ನನ್ನ ಕ್ಷೇತ್ರ ರಾಜಕೀಯವಲ್ಲ. ಹಾಗಾಗಿ ನನ್ನ ಮೇಲೆ ವೃಥಾ ಆರೋಪ ಮಾಡುವುದನ್ನು ಬಿಟ್ಟು, ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಕುರಿತು ಚಿಂತನೆ ನಡೆಸಲಿ ಎಂದು ತಿರುಗೇಟು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com