ವಿಶಾಖಪಟ್ಟಣಂ ಅಗ್ನಿ ಅವಘಡ: 40 ಗಂಟೆಯಾದರೂ ನಿಲ್ಲದ ಬೆಂಕಿಯ ರುದ್ರನರ್ತನ

ಆಂಧ್ರ ಪ್ರದೇಶದ ವಿಶಾಖಪಟ್ಟಣನ ಬಯೋಮ್ಯಾಕ್ಸ್ ಇಂಧನ ಕಂಪನಿಯ ತೈಲ ಸಂಗ್ರಹಗಾರದಲ್ಲಿ ಮಂಗಳವಾರ ರಾತ್ರಿ ಕಾಣಿಸಿಕೊಂಡ ಅಗ್ನಿ ಆಕಸ್ಮಿಕ ಇನ್ನೂ...
ಅಗ್ನಿ ಅವಘಡ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು
ಅಗ್ನಿ ಅವಘಡ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು
Updated on: 

ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖಪಟ್ಟಣನ ಬಯೋಮ್ಯಾಕ್ಸ್ ಇಂಧನ ಕಂಪನಿಯ ತೈಲ ಸಂಗ್ರಹಗಾರದಲ್ಲಿ ಮಂಗಳವಾರ ರಾತ್ರಿ ಕಾಣಿಸಿಕೊಂಡ ಅಗ್ನಿ ಆಕಸ್ಮಿಕ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.

ವಿಶಾಖಪಟ್ಟಣಂನ ಹೊರವಲಯದ ದುವ್ವಡ ಪ್ರದೇಶದ ವಿಶೇಷ ಆರ್ಥಿಕ ವಲಯದಲ್ಲಿರುವ ಬಯೋಮ್ಯಾಕ್ಸ್ ಎಂಬ ಜೈವಿಕ ಡೀಸೆಲ್ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಅಗ್ನಿ ಅವಘಡ ಸಂಭವಿಸಿದ 40 ಘಂಟೆಗಳಾದರೂ ಬೆಂಕಿಯ ರುದ್ರನರ್ತನ ಮುಂದುವರೆದಿದ್ದು, ಈ ವರೆಗೂ ನಿಯಂತ್ರಣಕ್ಕೆ ಬಂದಿಲ್ಲ.

ಸಂಗ್ರಹಗಾರದಲ್ಲಿ 18 ತೈಲ ಟ್ಯಾಂಕರ್ ಗಳಿದ್ದು, ಪ್ರತೀಯೊಂದು ಟ್ಯಾಂಕ್ ಗಳೂ 3 ಸಾವಿರ ಲೀಟರ್ ಸಾಮರ್ಥ್ಯವನ್ನು ಹೊಂದಿದ್ದವು. ಇದರಲ್ಲಿ ಶೇ.30 ರಿಂದ 70 ರಷ್ಟು ಇಂಥನವನ್ನು ತುಂಬಿಸಲಾಗಿತ್ತು. ಈ ಪೈಕಿ 6 ಟ್ಯಾಂಕರ್ ಗಳು ಸ್ಫೋಟಗೊಂಡಿದೆ. ಸತತ 40 ಗಂಟೆಗಳಿಂದಲೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನ ನಡೆಸುತ್ತಲೇ ಇದ್ದರೂ ಈ ವರೆಗೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅಗ್ನಿ ಶಾಮಕ ದಳ ಅಧಿಕಾರಿ ಜೆ. ಮೋಹನ ರಾವ್ ಅವರು, ಈಗಾಗಲು ಬೆಂಕಿ ಧಗಧಗಿಸುತ್ತಿದೆ. ಎರಡು ಟ್ಯಾಂಕ್ ಗಳನ್ನು ಬಿಟ್ಟರೆ, 10 ಟ್ಯಾಂಕರ್ ಈಗಾಗಲೇ ಸ್ಫೋಟಗೊಂಡಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದೇವೆ. ಇಂದು ಸಂಜೆಯೊಳಗಾಗಿ ಬೆಂಕಿ ನಿಯಂತ್ರಣಕ್ಕೆ ಬರಲಿದ್ದು, ರಾತ್ರಿಯೊಳಗಾಗಿ ಕಾರ್ಯಾಚರಣೆ ಯಶಸ್ವಿಗೊಳ್ಳಲಿದೆ. ಶುಕ್ರವಾರದವರೆಗೂ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಸ್ಥಳದಲ್ಲಿರುತ್ತಾರೆಂದು ಹೇಳಿದ್ದಾರೆ.

ಇನ್ನು ಘಟನೆಯಲ್ಲಿ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಆದರೆ, ಇಬ್ಬರು ನೌಕರರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೌಕಾದಳದ ಅಗ್ನಿ ಶಾಮಕ ಪಡೆ ಮತ್ತು ವಿಶಾಖ ಉಕ್ಕು ಸ್ಥಾವರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸು ಈಗಲೂ ಹರಸಾಹಸ ಪಡುತ್ತಿದ್ದಾರೆಂದು ತಿಳಿದುಬಂದಿದೆ.

ಬಯೋಮ್ಯಾಕ್ಸ್ ಜೈವಿಕ ಡೀಸೆಲ್ ತಯಾರಿಕಾ ಘಟಕ, ಭಾರತದಲ್ಲೇ ಅತಿ ದೊಡ್ಡ ಘಟಕವಾಗಿದ್ದು, ವಾರ್ಷಿಕ 5 ಲಕ್ಷ ಟನ್ ಡೀಸೆಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com