
ನವದಹೆಲಿ: ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣ ಇದೀಗ ದೇಶದ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರು ಒಬ್ಬರು ಮತ್ತೊಬ್ಬರ ಮೇಲೆ ಆರೋಪ ಹೊರಿಸುತ್ತಿದ್ದಾರೆ.
ಪ್ರಕರಣ ಸಂಬಂಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಈ ಹಿಂದೆ ಪ್ರಶ್ನಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನಾಲ್ಕು ಪ್ರಶ್ನೆಗಳನ್ನು ಕೇಳಿ, ಈ ಬಗ್ಗೆ ಉತ್ತರಿಸುವಂತೆ ಆಗ್ರಹಿಸಿದ್ದರು. "ಮೂಲ ತಯಾರಿಕಾ ಸಂಸ್ಥೆಯಾಗಿಲ್ಲದಿದ್ದರೂ ಅಗಸ್ಟಾ ವೆಸ್ಚ್ ಲ್ಯಾಂಡ್ ಸಂಸ್ಥೆಯ ಟೆಂಡರ್ ಫೈಲ್ ಗೆ ಅನುಮತಿ ನೀಡಿದ್ದು ಯಾರು?, ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆ ಹೆಲಿಕಾಪ್ಟರ್ ತಯಾರಿ ಮಾಡಿಕೊಡಬಲ್ಲದು ಎಂದು ತಾಂತ್ರಿಕವಾಗಿ ಖಾತರಿ ಪಡಿಸಿದ್ದು ಯಾರು? ಮತ್ತು ಭಾರತ ಸರ್ಕಾರ ವಿಧಿಸಿದ್ದ ಟೆಂಡರ್ ನೀತಿಗಳನ್ನು ಮಧ್ಯಂತರದಲ್ಲಿ ಬದಲಾವಣೆ ಮಾಡಿದ್ದು ಯಾರು? ಮತ್ತು ಕಾಪ್ಟರ್ ಹಾರುವ ಎತ್ತರವನ್ನೇಕೆ ಕಡಿತಗೊಳಿಸಲಾಯಿತು? ಎಂಬ ನಾಲ್ಕು ಪ್ರಶ್ನೆಗಳನ್ನು ಅಮಿತ್ ಶಾ ಕಾಂಗ್ರೆಸ್ ಮುಂದಿಟ್ಟಿದ್ದರು.
ಇದೀಗ ಬಿಜೆಪಿ ಪ್ರಶ್ನೆಗೆ ಮತ್ತೆ ಮರುಪ್ರಶ್ನೆ ಮೂಲಕ ಉತ್ತರಿಸಿರುವ ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆ ಮೋಸದ ಸಂಸ್ಥೆಯಾಗಿದ್ದರೆ ಇದೇ ಎನ್ ಡಿಎಸ್ ಸರ್ಕಾರ ರಕ್ಷಣಾ ಪ್ರದರ್ಶನದಲ್ಲಿ ಆ ಸಂಸ್ಥೆಗೇಕೆ ಅವಕಾಶ ನೀಡಿತ್ತು? ಮತ್ತು ಆ ಫಿನ್ ಮೆಕಾನಿಕಾ ಮತ್ತು ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯನ್ನೇಕೆ ಎರಡು ವರ್ಷಗಳಿಂದ ರಕ್ಷಿಸುತ್ತಿದೆ. ಆ ಸಂಸ್ಥೆಗಳ ವಿರುದ್ದ ಕ್ರಮವನ್ನೇಕೆ ಕೈಗೊಳ್ಳುತ್ತಿಲ್ಲ? 2015 ಅಕ್ಟೋಬರ್ 8ರಂದು ಈ ಸಂಸ್ಥೆಗಳಿಗೇಕೆ ಕೇಂದ್ರ ಸರ್ಕಾರ ಎಫ್ ಐಪಿಬಿ ಅನುಮತಿ ಹೇಗೆ ನೀಡಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಅಂತೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಹರಿಹಾಯ್ದಿರುವ ರಣದೀಪ್ ಸುರ್ಜೇವಾಲಾ, ಸೋನಿಯಾಗಾಂಧಿ ಅವರ ಮೇಲೆ ಬಿಜೆಪಿ ಇಲ್ಲ-ಸಲ್ಲದ ಆರೋಪ ಮಾಡುವ ಮೂಲಕ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
Advertisement