ಉತ್ತರಾಖಂಡ್ ನಲ್ಲಿ ಕಾಡ್ಗಿಚ್ಚು: ಬೆಂಕಿ ನಂದಿಸಲು ಎನ್ ಡಿ ಆರ್ ಎಫ್ ತಂಡ ಹರಸಾಹಸ

ಉತ್ತರಾಖಂಡದ 13 ಜಿಲ್ಲೆಗಳಲ್ಲಿ 1900 ಹೆಕ್ಟೇರ್​ಗೂ ಹೆಚ್ಚಿನ ಕಾಡನ್ನು ಆಹುತಿ ತೆಗೆದುಕೊಂಡಿರುವ ಕಾಡ್ಗಿಚ್ಚನ್ನು ನಿಯಂತ್ರಿಲು 3 ಎನ್​ಡಿಆರ್​ಎಫ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಡೆಹರಾಡೂನ್: ಉತ್ತರಾಖಂಡದ 13 ಜಿಲ್ಲೆಗಳಲ್ಲಿ 1900 ಹೆಕ್ಟೇರ್​ಗೂ ಹೆಚ್ಚಿನ ಕಾಡನ್ನು ಆಹುತಿ ತೆಗೆದುಕೊಂಡಿರುವ ಕಾಡ್ಗಿಚ್ಚನ್ನು ನಿಯಂತ್ರಿಲು 3 ಎನ್​ಡಿಆರ್​ಎಫ್ ತಂಡವನ್ನು ನಿಯೋಜಿಸಲಾಗಿದೆ.

ಬೆಂಕಿಯನ್ನು ನಿಯಂತ್ರಣಕ್ಕೆ ತರಲು 135 ತಜ್ಞರ ತಂಡ ಹರಸಾಹಸ ಪಡುತ್ತಿದೆ. ಎನ್​ಡಿಆರ್​ಎಫ್ ತಂಡ ನೀರಿನ ಟ್ಯಾಂಕರ್​ಗಳು, ಪಂಪ್​ಗಳು ಮತ್ತು ಅಗತ್ಯ ಔಷಧಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದೆ.

ಎನ್​ಡಿಆರ್​ಎಫ್ ತಂಡ ಅಲ್ಮೋರಾ, ಪೌರಿ, ಗಾಚರ್​ನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಎನ್​ಡಿಆರ್​ಎಫ್​ನ ಮಹಾನಿರ್ದೇಶಕ ಓಪಿ ಸಿಂಗ್ ತಿಳಿಸಿದ್ದಾರೆ. ಶುಷ್ಕ ವಾತಾವರಣ, ಹೆಚ್ಚಾದ ತಾಪಮಾನ ಮತ್ತು ಅತಿಯಾದ ಗಾಳಿಯಿಂದಾಗಿ ಬೆಂಕಿ ಹತೋಟಿ ಮೀರಿ ಹಬ್ಬುತ್ತಿದೆ. ಜತೆಗೆ ಕಾರ್ಯಾಚರಣೆ ನಡೆಸಲು ಕಷ್ಟವಾಗುತ್ತಿದೆ ಎಂದು ಎನ್​ಡಿಆರ್​ಎಫ್ ತಂಡ ತಿಳಿಸಿದೆ.

ರಕ್ಷಿತಾರಣ್ಯಗಳಿಗೂ ಬೆಂಕಿ ಹಬ್ಬಿದೆ. ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್​ನ 198 ಹೆಕ್ಟೇರ್ ಕಾಡು ಬೆಂಕಿಗೆ ನಾಶವಾಗಿದೆ. ಜತೆಗೆ ರಾಜಾಜಿ ಹುಲಿ ಸಂರಕ್ಷಿತ ಅರಣ್ಯದಲ್ಲಿ 70 ಹೆಕ್ಟೇರ್ ಮತ್ತು ಕೇದಾರ್​ನಾಥ್ ಮಸ್ಕ್ ಡೀರ್ ಸ್ಯಾಂಚುರಿನಲ್ಲಿ 60 ಹೆಕ್ಟೇರ್ ಅರಣ್ಯ ಕಾಡ್ಗಿಚ್ಚಿಗೆ ಬಲಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com