ಗೆಳೆಯನ ಇಚ್ಛೆಯಂತೆ ಸಿದ್ದಿಖ್, ಗೆಳೆಯನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ಒಪ್ಪಿ ಆಕೆಯ ಮನವೊಲಿಸಲು ನೋಡಿದ್ದಾನೆ. ಇದನ್ನು ಆಕೆ ಪ್ರತಿಭಟಿಸಿದಾಗ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಸಿದ್ದಿಖ್‌ನ ಕೈಯಿಂದ ತಪ್ಪಿಸಲು ಆಕೆ ಯತ್ನಿಸಿದಾಗ ಆಕೆಯ ಪತಿಯೇ ಆಕೆಯನ್ನು ಅಡ್ಡಗಡ್ಡಿ ಸಿದ್ದಿಖ್‌ನ ತೆಕ್ಕೆಗೆ ದೂಡಿದ್ದಾನೆ. ಸಿದ್ದಿಖ್, ತನ್ನ ಗೆಳೆಯನ ಪತ್ನಿಯನ್ನು ಗೆಳೆಯನ ಕಣ್ಮುಂದೆಯೇ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.