ಬಹುಕೋಟಿ ವಿವಿಐಪಿ ಕಾಪ್ಟರ್ ಹಗರಣದ ಮತ್ತೋರ್ವ ಪ್ರಮುಖ ಆರೋಪಿ ಕುರಿತು ಮಾಹಿತಿ

ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಹಗರಣದ ಮತ್ತೋರ್ವ ಪ್ರಮುಖ ದಲ್ಲಾಳಿ ಕಾರ್ಲೋ ಗೆರೋಸಾ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನದ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ..
ಎಸ್ ಪಿ ತ್ಯಾಗಿ ಮತ್ತು ಅಜ್ಞಾತ ದಲ್ಲಾಳಿ ಗೆರೋಸಾ (ಸಂಗ್ರಹ ಚಿತ್ರ)
ಎಸ್ ಪಿ ತ್ಯಾಗಿ ಮತ್ತು ಅಜ್ಞಾತ ದಲ್ಲಾಳಿ ಗೆರೋಸಾ (ಸಂಗ್ರಹ ಚಿತ್ರ)
Updated on

ನವದೆಹಲಿ: ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಹಗರಣದ ಮತ್ತೋರ್ವ ಪ್ರಮುಖ ದಲ್ಲಾಳಿ ಕಾರ್ಲೋ ಗೆರೋಸಾ ಕುರಿತು ಸಿಬಿಐ  ಮತ್ತು ಜಾರಿ ನಿರ್ದೇಶನದ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.

ಮೂಲಗಳ ಪ್ರಕಾರ ಪ್ರಸ್ತುತ ಹಗರಣ ಸಂಬಂಧ ತನಿಖೆ ಎದುರಿಸುತ್ತಿರುವ ಆರೋಪಿಗಳು ನೀಡಿರುವ ಮಾಹಿತಿಯನ್ವಯ ಹಗರಣದಲ್ಲಿ ಸ್ವಿಸ್ ಮೂಲದ ದಲ್ಲಾಳಿ ಕಾರ್ಲೋ ಗೆರೋಸಾ ಕೂಡ  ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿದುಬಂದಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಲೆ ಹಾಕಿರುವ ಮಾಹಿತಿ ಪ್ರಕಾರ, ಕಾಪ್ಟರ್ ಖರೀದಿ ಒಪ್ಪಂದ ಸಂಬಂಧ ದಲ್ಲಾಳಿ  ಕಾರ್ಲೋ ಗೆರೋಸಾನ ಸ್ವಿಟ್ಜರ್ಲೆಂಡ್ ಮೊಬೈಲ್ ಸಂಖ್ಯೆ 41796****71 ಕ್ಕೆ 2010 ಫೆಬ್ರವರಿ 8ರಂದು ಅಂದರೆ ಭಾರತ ಸರ್ಕಾರ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ  ಹಾಕಿದ ದಿನವೇ ಭಾರತದ 9810****91 ಸಂಖ್ಯೆಯಿಂದ ಕರೆ ಹೋಗಿದ್ದ ವಿಚಾರವನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.

ಈ  ವರೆಗೂ ಈ ಸಂಬಂಧ ವಿವಿಧ ದಲ್ಲಾಳಿಗೆ ಭಾರತದಿಂದ ಕರೆ ಹೋಗಿತ್ತಾದರೂ ಕೆಲ ದೂರವಾಣಿ ಕರೆಗಳ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿರಲಿಲ್ಲ. ಹೀಗಾಗಿ ತನಿಖೆಗೆ ಇದು  ಅಡ್ಡಿಯಾಗಿತ್ತು. ಇದೀಗ ದಲ್ಲಾಳಿ ಕಾರ್ಲೋಸ್ ಗೆರೋಸಾ ಕುರಿತು ಮಾಹಿತಿ ಲಭ್ಯವಾಗಿರುವುದು ತನಿಖಾಧಿಕಾರಿಗಳಿಗೆ ಪ್ರಮುಖ ತಿರುವು ದೊರೆತಂದಾಗಿದ್ದು, ತನಿಖೆ ಚುರುಕು ಪಡೆದುಕೊಂಡಿದೆ.  ಇನ್ನು ದಲ್ಲಾಳಿ ಕಾರ್ಲೋಸ್ ಗೆರೋಸಾಗೆ ಭಾರತದಿಂದ ಕರೆ ಮಾಡಿದ್ದು ಯಾರು ಎಂಬುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದ್ದು, ಅದಕ್ಕೂ ಇಡಿ ಅಧಿಕಾರು ಉತ್ತರಕಂಡುಕೊಂಡಿದ್ದಾರೆ.  ಭಾರತದಿಂದ ಅಂದಿನ ವಾಯುಸೇನಾ ಮುಖ್ಯಸ್ಥ ಎಸ್ ಪಿ ತ್ಯಾಗಿ ಅವರ ಸಹೋದರ ಸಂಬಂಧಿ ಸಂದೀಪ್ ತ್ಯಾಗಿ ಎಂಬುವವರು ಕರೆ ಮಾಡಿರುವ ಕುರಿತು ಅಧಿಕಾರಿಗಳು ಮಾಹಿತಿ  ಕಲೆಹಾಕಿದ್ದಾರೆ.

ಅಂತೆಯೇ ಈ ಕರೆ ಮಾಡಿದ ಬಳಿಕ ಸುಮಾರು 10 ದಿನಗಳ ಅಂತರದಲ್ಲಿ ಅಂದರೆ 2010 ಫೆಬ್ರವರಿ 20ರಂದು ಮತ್ತೆ ಸ್ವಿಟ್ಜರ್ ಲೆಂಡ್ ನಿಂದ ಸಂದೀಪ್ ತ್ಯಾಗಿ ಅವರಿಗೆ ಕರೆಬಂದಿದ್ದು, ಆ ಕರೆಯನ್ನು  ದಲ್ಲಾಳಿ ಕಾರ್ಲೋಸ್ ಗೆರೋಸಾ 417*****989 ನಿಂದ ಮಾಡಿದ್ದ ಎಂದು ತಿಳಿದುಬಂದಿದೆ. ಗೆರೋಸಾ ಕೂಡ ಹಗರಣದ ಪ್ರಮುಖ ದಲ್ಲಾಳಿ ಗಿಡೋ ಹಶ್ಕೆಯ ಆಪ್ತನಾಗಿದ್ದು, ಎಲ್ಲರೂ ಸೇರಿ ಕಾಪ್ಟರ್  ಹಗರದ ಒಪ್ಪಂದ ಕುದುರಿಸಿದ್ದರು ಎಂದು ತಿಳಿದುಬಂದಿದೆ.

ಸುಮಾರು ತಿಂಗಳುಗಳ ಕಾಲ ಸಂದೀಪ್ ತ್ಯಾಗಿ ಮತ್ತು ಕಾರ್ಲೋಸ್ ಗೆರೋಸಾ ಆಗಾಗ ದೂರವಾಣಿ ಸಂಪಕರ್ದಲ್ಲಿದ್ದ ವಿಚಾರ ಇದೀಗ ಬಹಿರಂಗವಾಗಿದೆ. ಇನ್ನು ಹಗರಣದಲ್ಲಿ ತ್ಯಾಗಿ ಅವರ  ಮತ್ತೋರ್ವ ಸಹೋದರ ರಾಜೀವ್ ತ್ಯಾಗಿ ಪಾತ್ರದ ಕುರಿತೂ ಇಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಹಗರಣ ಬೆಳಕಿಗೆ  ಬಂದ ಬಳಿಕ ತ್ಯಾಗಿ ಮತ್ತು ಗೆರೋಸಾ 2012 ಏಪ್ರಿಲ್ ನಲ್ಲಿ ಮತ್ತೆ ದೂರವಾಣಿ ಮೂಲಕ ಚರ್ಚಿಸಿದ್ದು, ಇದು ಹಗರಣದಲ್ಲಿ ಆರೋಪಿಗಳು ಭಾಗಿಯಾಗಿರುವ ಕುರಿತು ಪ್ರಮುಖ ಸಾಕ್ಷ್ಯಾಧಾರವಾಗಿದೆ  ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com