ಸಬ್ಸಿಡಿ ರಹಿತ ಎಲ್ ಪಿಜಿ, ವಿಮಾನ ಇಂಧನ ದರ ಕೂಡ ಹೆಚ್ಚಳ

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾದ ಬೆನ್ನಲ್ಲೇ ಸಬ್ಸಿಡಿ ರಹಿತ ಎಲ್ ಪಿಜಿ ಮತ್ತು ವಿಮಾನಗಳಲ್ಲಿ ಬಳಕೆ ಮಾಡಲಾಗುವ ಇಂಧನಗಳ ದರ ಕೂಡ ಏರಿಕೆಯಾಗಿದೆ...
ಸಬ್ಸಿಡಿ ರಹಿತ ಎಲ್ ಪಿಜಿ ದರ ಹೆಚ್ಚಳ (ಸಂಗ್ರಹ ಚಿತ್ರ)
ಸಬ್ಸಿಡಿ ರಹಿತ ಎಲ್ ಪಿಜಿ ದರ ಹೆಚ್ಚಳ (ಸಂಗ್ರಹ ಚಿತ್ರ)

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾದ ಬೆನ್ನಲ್ಲೇ ಸಬ್ಸಿಡಿ ರಹಿತ ಎಲ್ ಪಿಜಿ ಮತ್ತು ವಿಮಾನಗಳಲ್ಲಿ ಬಳಕೆ ಮಾಡಲಾಗುವ ಇಂಧನಗಳ ದರ ಕೂಡ ಏರಿಕೆಯಾಗಿದೆ.

ಪ್ರತೀ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಕನಿಷ್ಠ 18ರು. ಜಾಸ್ತಿಯಾಗಿದ್ದು, ಅಲ್ಲದೆ ಅಬ್ಸಿಡಿ ರಹಿತ ಸೀಮೆಎಣ್ಣೆ, ವಿಮಾನ ಟೈರ್ಬನ್ ಇಂಧನ (ಎಟಿಎಫ್)ಬೆಲೆಯನ್ನೂ ಕೂಡ  ಹೆಚ್ಚಿಸಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಉತ್ಪಾದನೆ ಹೆಚ್ಚಾದ ಹಿನ್ನಲೆಯಲ್ಲಿ ಬೇಡಿಕೆ ಕುಸಿದಿತ್ತು. ಇದೀಗ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಇಂಧನ ಉತ್ಪಾದನೆ ಮಾಡುವ ರಾಷ್ಟ್ರಗಳು  ತೆಗೆದುಕೊಂಡಿರುವ ಕಠಿಣ ನಿರ್ಧಾರಗಳಿಂದಾಗಿ ಉತ್ಪಾದನೆ ಕುಸಿದಿದ್ದು, ಬೇಡಿಕೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ದರ ಕೂಡ ಏರಿಕೆಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ರಾತ್ರಿಯಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ ಕ್ರಮವಾಗಿ 1.06 ರು. ಮತ್ತು 2.94 ರು. ಹೆಚ್ಚಿಳವಾಗಿತ್ತು. ಇದರ ಬೆನ್ನಲ್ಲೇ ಅಂದರೆ ಭಾನುವಾರ ಸಬ್ಸಿಡಿ ರಹಿತ  ಅಡುಗೆ ಅನಿಲದ 14.2 ಕೆಜಿ ಪ್ರತಿ ಸಿಲಿಂಡರ್ ಮೇಲೆ 18 ರು. ಹೆಚ್ಚಿಸಲಾಗಿದ್ದು, ಸೀಮೆಎಣ್ಣೆ ಮೇಲಿನ ದರವನ್ನು ಪ್ರತಿ ಲೀಟರ್​ಗೆ 3 ರು. ಹೆಚ್ಚಿಸಲಾಗಿದೆ. ಇನ್ನು ವಿಮಾನ ಟೈರ್ಬನ್ ಇಂಧನದ  ಬೆಲೆಯಲ್ಲಿ ಕೂಡ ಶೇ.1.5ರಷ್ಟು ಹೆಚ್ಚಿಳವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com