
ಲಕ್ನೋ: ಬುಲಂದ್ ಶಹರ್ ನಲ್ಲಿ ತಾಯಿ ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಂತರ ಅಪ್ರಾಪ್ತ ಮಗಳಿಗೆ ರಕ್ತಸ್ರಾವವಾಗುತ್ತಿದ್ದರೂ ವೈದ್ಯರು ನಮ್ಮ ಆ ಸ್ಥಿತಿಯನ್ನು ನಂಬಲಿಲ್ಲ ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ ಹಾಗೂ ಬಾಲಕಿಯ ತಾಯಿ ಹೇಳಿದ್ದಾರೆ.
ಆಂಗ್ಲ ಚಾನೆಲ್ ವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಆಕೆ ಅದು ನನ್ನ ಮತ್ತು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ನಂತರ ತಮ್ಮ ಅಪ್ರಾಪ್ತ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ನಡೆದ ಘಟನೆ ಬಗ್ಗೆ ವಿವರಿಸಲಾಯಿತು, ಆದರೆ ವೈದ್ಯರು ನಾವು ಹೇಳಿದ ಸತ್ಯವನ್ನು ನಂಬಲೇ ಇಲ್ಲ ಎಂದು ಹೇಳಿರುವ ಅವರು ಘಟನೆ ನಡೆದ ನಂತರ ದೂರು ಕೊಡಲು ಹೋದಾಗ ಪೊಲೀಸರು ಹಾಗೂ ವೈದ್ಯರು ತಮ್ಮನ್ನು ನಿಕೃಷ್ಟವಾಗಿ ನಡೆಸಿಕೊಂಡರು ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದಿಂದ ಶಹಾಪೂರ್ ಗೆ ತೆರಳುತ್ತಿದ್ದ ಕುಟುಂಬದ ಮೇಲೆ ದಾಳಿ ಮಾಡಿದ ದರೋಡೆಕೋರರ ತಂಡ ತಾಯಿ ಮತ್ತು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡಸಿತ್ತು.
ಸುಮಾರು 8ರಿಂದ10 ಮಂದಿಯಿದ್ದ ತಂಡ ನಮ್ಮ ಕೈ ಹಾಗೂ ಕಾಲುಗಳನ್ನು ಕಟ್ಟಿ ಹಾಕಿ ಚೆನ್ನಾಗಿ ಥಳಿಸಿದರು. ಬಾಯಾರಿಕೆಯಿಂದ ನೀರು ಕೇಳಿದರು ಅದಕ್ಕೂ ಥಳಿಸಿದರು. ನಂತರ ಸಹಾಯಕ್ಕಾಗಿ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದರೂ ಯಾರು ತಮ್ಮ ನೆರವಿಗೆ ಬರಲಿಲ್ಲ ಎಂದು ವೃತ್ತಿಯಲ್ಲಿ ಚಾಲಕನಾಗಿರುವ ಬಾಲಕಿಯ ತಂದೆ ತಿಳಿಸಿದ್ದಾರೆ.
Advertisement