ಪಠಾಣ್ ಕೋಟ್: ವಿವಾದಿತ ಎಸ್ ಪಿ ಸಲ್ವಿಂದರ್ ಸಿಂಗ್ ವಿರುದ್ಧ ಅತ್ಯಾಚಾರ ಆರೋಪ

ಪಠಾಣ್ ಕೋಟ್ ಉಗ್ರ ದಾಳಿ ಸಂದರ್ಭದಲ್ಲಿ ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ ಅನುಮಾನಸ್ಪದವಾಗಿ ತಪ್ಪಿಸಿಕೊಂಡಿದ್ದ ವಿವಾದಿತ ಎಸ್ ಪಿ ಸಲ್ವೀಂದರ್ ಸಿಂಗ್ ಇದೀಗ ಹೊಸದಂದು ವಿವಾದದಲ್ಲಿ ಸಿಲುಕಿದ್ದು, ಅವರ ವಿರುದ್ಧ ಅತ್ಯಾಚಾರ ಆರೋಪವೊಂದು ಕೇಳಿಬಂದಿದೆ.
ವಿವಾದಿತ ಎಸ್ ಪಿ ಸಲ್ವಿಂದರ್ ಸಿಂಗ್ (ಸಂಗ್ರಹ ಚಿತ್ರ)
ವಿವಾದಿತ ಎಸ್ ಪಿ ಸಲ್ವಿಂದರ್ ಸಿಂಗ್ (ಸಂಗ್ರಹ ಚಿತ್ರ)

ಚಂಡೀಘಡ: ಪಠಾಣ್ ಕೋಟ್ ಉಗ್ರ ದಾಳಿ ಸಂದರ್ಭದಲ್ಲಿ ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ ಅನುಮಾನಸ್ಪದವಾಗಿ ತಪ್ಪಿಸಿಕೊಂಡಿದ್ದ ವಿವಾದಿತ ಎಸ್ ಪಿ ಸಲ್ವೀಂದರ್ ಸಿಂಗ್  ಇದೀಗ ಹೊಸದಂದು ವಿವಾದದಲ್ಲಿ ಸಿಲುಕಿದ್ದು, ಅವರ ವಿರುದ್ಧ ಅತ್ಯಾಚಾರ ಆರೋಪವೊಂದು ಕೇಳಿಬಂದಿದೆ.

ಗುರುದಾಸಪುರದ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ್ ಸಿಂಗ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಜಲಂದರ್​ನಲ್ಲಿ 75 ಬೆಟಾಲಿಯನ್ ಕಮಾಂಡೆಂಟ್ ಆಗಿರುವ  ಯೋಧನೊಬ್ಬ ತಮ್ಮ ಪತ್ನಿಯ ಮೇಲೆ ಸಲ್ವಿಂದರ್ ಸಿಂಗ್ ಅತ್ಯಾಚಾರವೆಸಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸಲ್ವಿಂದರ್ ಸಿಂಗ್ ಅವರನ್ನು ಗುರುದಾಸಪುರ ಠಾಣಾ  ಪೊಲೀಸರು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಗುರುದಾಸ್ ಪುರದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವೊಂದರ ಸಂಬಂಧ ತನಿಖೆ ನಡೆಸುತ್ತಿದ್ದ ಅಂದಿನ ಎಸ್ ಪಿ ಸಲ್ವೀಂದರ್ ಸಿಂಗ್ ಅವರು ಅತ್ಯಾಚಾರ ಸಂತ್ರಸ್ತೆಗೆ ಕ್ಲೀನ್  ಚಿಟ್ ನೀಡಲು ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. ಅಲ್ಲದೆ 50 ಸಾವಿರ ರು. ಲಂಚ ಕೇಳಿದ್ದರು ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಸಂಬಂಧ ತನಿಖೆ ನಡೆಸುತ್ತಿರುವ  ಗುರುದಾಸ್ ಪುರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸಲ್ವಿಂದರ್ ಸಿಂಗ್ ಅತ್ಯಾಚಾರ ಸಂತ್ರಸ್ಥೆಯನ್ನು ಲೈಂಗಿಕವಾಗಿ ಬಳಿಸಿಕೊಂಡ ಕುರಿತು ಸಾಕ್ಷಿಗಳು ಲಭ್ಯವಾಗಿದ್ದು, ಯಾವುದೇ ಕ್ಷಣದಲ್ಲಿ  ಅವರನ್ನು ಬಂಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಪಠಾಣ್ ಕೋಟ್ ನಲ್ಲಿರುವ ಸೇನಾ ವಾಯುನೆಲೆ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನಿ ಉಗ್ರರು ಇದೇ ಸಲ್ವಿಂದರ್ ಸಿಂಗ್ ರನ್ನು ಅವರ ಕಾರಿನಲ್ಲೇ ಅಪಹರಣ ಮಾಡಿದ್ದರು. ಆದರೆ  ಉಗ್ರರು ಇವರಿಗೆ ಯಾವುದೇ ತೊಂದರೆ ನೀಡದೇ ಅವರ ಮೇಲೆ ಸಣ್ಣ ಪ್ರಮಾಣದ ಹಲ್ಲೆ ಮಾಡಿ ಬಿಟ್ಟಿದ್ದರು. ಬಳಿಕ ಸಲ್ವಿಂದರ್ ಸಿಂಗ್ ರನ್ನು ಅನುಮಾನಾಸ್ಪದವಾಗಿ ನೋಡಲಾಗಿತ್ತು. ಉಗ್ರರ  ಬೆದರಿಕೆಗೆ ಹೆದರಿ ಅಥವಾ ಹಣದ ಆಮಿಷಕ್ಕೆ ತುತ್ತಾಗಿ ಸಲ್ವಿಂದರ್ ಸಿಂಗ್ ಅವರೇ ಸೇನಾ ನೆಲೆಯ ರಹಸ್ಯಗಳನ್ನು ಬಿಟ್ಟುಕೊಟ್ಟಿರಬಹುದೇ ಎಂಬ ಅನುಮಾನದ ಮೇರೆಗೆ ರಾಷ್ಟ್ರೀಯ ತನಿಖಾ  ದಳ ತನಿಖೆ ಕೂಡ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com