

ಭೂಪಾಲ: ನಕಲಿ ಗೋರಕ್ಷಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವ ಬಿಜೆಪಿ ನೇತೃತ್ವದ ಮಧ್ಯಪ್ರದೇಶ ಸರ್ಕಾರದ ಹಿರಿಯ ಅಧಿಕಾರಿ ಮಹಾಮಂಡಲೇಶ್ವರ ಸ್ವಾಮಿ, ಅಕಿಲೇಶ್ವಾರನಂದ ಗಿರಿ ಹಸುವಿಗಾಗಿ 2 ನೇ ವಿಶ್ವ ಮಹಾಸಮರ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.
ಮಧ್ಯಪ್ರದೇಶದ ಗೋಪಾಲನ್ ಇವಂ ಪಶುದಾನ್ ಸಂವರ್ಧನಾ ಕಾರ್ಯಕಾರಿ ಸಮತಿ ಅಧ್ಯಕ್ಷ ಹಾಗೂ ಮಧ್ಯ ಪ್ರದೇಶ ಸರ್ಕಾರದ ಗೋರಕ್ಷಣೆ ಮತ್ತು ಸಂರಕ್ಷಣೆ ಸಮಿತಿಯ ಮುಖ್ಯಸ್ಥರೂ ಆಗಿರುವ ಮಹಾಮಂಡಲೇಶ್ವರ ಸ್ವಾಮಿ, ಅಕಿಲೇಶ್ವಾರನಂದ ಗಿರಿ
ಹಸು ಯಾವಾಗಲೂ ಜಗಳದ ಮೂಲ ವಸ್ತುವಾಗಿರುತ್ತದೆ. 1857 ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದೇ ಹಸುವಿನ ಕಾರಣಕ್ಕಾಗಿ ಎಂದು ಅವರು ತಿಳಿಸಿದ್ದಾರೆ.
ಹಸುವನ್ನು ಗಾಯಗೊಳಿಸುವುದು, ಇಲ್ಲವೇ ಸತ್ತ ಹಸುವನ್ನು ಪ್ಯಾಕ್ ಮಾಡಿ ವಾಹನಗಳಲ್ಲಿ ಸಾಗಿಸುವುದನ್ನು ನೋಡಿದಾಗ, ಹಿಂದೂಗಳಿಗೆ ಸಹಜವಾಗಿಯೇ ಆಕ್ರೋಶ ಮೂಡುತ್ತದೆ. ಇದೊಂದು ಭಾವನಾತ್ಮಕ ವಿಚಾರವಾಗಿರುವುದರಿಂದ ಅಲ್ಲಿ ಘರ್ಷಣೆ ನಡೆಯುವುದು ಸಾಮಾನ್ಯ ಎಂದು ಹೇಲಿರುವ ಅವರು,ಯಾರೇ ಆದರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು.
ಹಸುಗಳನ್ನು ಸಾಗಿಸುವ ವಾಹನಗಳನ್ನು ತಡೆದು, ನಂತರ ಪೊಲೀಸರಿಗೆ ಮಾಹಿತಿ ನೀಡಬೇಕು. ಎಲ್ಲಾ ರಾಜ್ಯಗಳು ಗೋಹತ್ಯೆಯನ್ನು ಕಠಿಣವಾಗಿ ಜಾರಿಗೆ ತಂದರೇ ಗೋವುಗಳ ಕಳ್ಳಸಾಗಣೆ ನಡೆಯಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.