ಉತ್ತರ ಪ್ರದೇಶ: ರಾಷ್ಟ್ರಗೀತೆ ನಿಷೇಧಿಸಿದ್ದ ಶಾಲೆಗೆ ಬೀಗ

ಭಾರತ ಭಾಗ್ಯವಿಧಾತ ಎಂಬ ಸಾಲುಗಳಿರುವ ರಾಷ್ಟ್ರಗೀತೆ ಇಸ್ಲಾಮ್ ಗೆ ವಿರೋಧಿ ಎಂಬ ಕಾರಣ ನೀಡಿ ರಾಷ್ಟ್ರಗೀತೆಯನ್ನು ನಿಷೇಧಿಸಿದ್ದ ಉತ್ತರ ಪ್ರದೇಶದ ಶಾಲೆಯನ್ನು ಮುಚ್ಚಿಸಲಾಗಿದೆ.
ರಾಷ್ಟ್ರಗೀತೆ ನಿಷೇಧಿಸಿದ್ದ ಶಾಲೆಗೆ ಬಿಗ
ರಾಷ್ಟ್ರಗೀತೆ ನಿಷೇಧಿಸಿದ್ದ ಶಾಲೆಗೆ ಬಿಗ

ಅಲಹಾಬಾದ್: ಭಾರತ ಭಾಗ್ಯವಿಧಾತ ಎಂಬ ಸಾಲುಗಳಿರುವ ರಾಷ್ಟ್ರಗೀತೆ ಇಸ್ಲಾಮ್ ಗೆ ವಿರೋಧಿ ಎಂಬ ಕಾರಣ ನೀಡಿ ರಾಷ್ಟ್ರಗೀತೆಯನ್ನು ನಿಷೇಧಿಸಿದ್ದ ಉತ್ತರ ಪ್ರದೇಶದ ಶಾಲೆಯನ್ನು ಮುಚ್ಚಿಸಲಾಗಿದೆ.

ರಾಷ್ಟ್ರಗೀತೆ ಇಸ್ಲಾಮ್ ಗೆ ವಿರುದ್ಧ ಎಂಬ ಕಾರಣದಿಂದ ಉತ್ತರ ಪ್ರದೇಶದಲ್ಲಿರುವ ಎಂಎ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡುವುದನ್ನು ನಿಷೇಧಿಸಲಾಗಿತ್ತು. ಶಾಲೆಯ ಮುಖ್ಯಸ್ಥ ಜಿಯಾ-ಉಲ್- ಹಕ್ ನ್ನು ಈಗಾಗಲೇ ಬಂಧಿಸಲಾಗಿದೆ.

ಶಾಲೆ ಮುಚ್ಚಲಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಸರಿಯಾದ ಅನುಮತಿ ಇಲ್ಲದೆ ಎರಡು ದಶಕಗಳ ಕಾಲ ಎಂಎ ಕಾನ್ವೆಂಟ್ ನ್ನು ನಡೆಸುತ್ತಿರುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಲಹಾಬಾದ್ ನ ಎಂಎ ಕಾನ್ವೆಂಟ್ ನಲ್ಲಿ ರಾಷ್ಟ್ರಗೀತೆಯನ್ನು ನಿಷೇಧಿಸಲಾಗಿದ್ದರ ಬಗ್ಗೆ ವಿವಾದ ಉಂಟಾಗಿ ಶಾಲಾ ಆಡಳಿತದ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com