102 ಕ್ಕೆ ಮಾಡಿದ ಕರೆಯನ್ನು ಸ್ವೀಕರಿಸುವವರಿರಲಿಲ್ಲ; ರಸ್ತೆಯಲ್ಲೇ ಬುಡಕಟ್ಟು ಮಹಿಳೆಗೆ ಹೆರಿಗೆ!

ಒಡಿಶಾದ ಕೋರಾಪುಟ್ ಜಿಲ್ಲೆಯಲ್ಲಿ ತುರ್ತು ಆಂಬುಲೆನ್ಸ್ ಸೇವೆ ಒದಗಿಸುವ 102 ಹಾಗೂ 108 ನಂಬರ್ ಗಳಿಗೆ ಕರೆ ಮಾಡಿದರೆ ಯಾರೂ ಕರೆಯನ್ನು ಸ್ವೀಕರಿಸದ ಪರಿಣಾಮ ಗರ್ಭಿಣಿಯೊಬ್ಬರಿಗೆ ರಸ್ತೆಯಲ್ಲೇ....
102 ಕ್ಕೆ ಮಾಡಿದ ಕರೆಯನ್ನು ಸ್ವೀಕರಿಸುವವರಿರಲಿಲ್ಲ; ರಸ್ತೆಯಲ್ಲೇ ಬುಡಕಟ್ಟು ಮಹಿಳೆಗೆ ಹೆರಿಗೆ!
102 ಕ್ಕೆ ಮಾಡಿದ ಕರೆಯನ್ನು ಸ್ವೀಕರಿಸುವವರಿರಲಿಲ್ಲ; ರಸ್ತೆಯಲ್ಲೇ ಬುಡಕಟ್ಟು ಮಹಿಳೆಗೆ ಹೆರಿಗೆ!

ಕೋರಾಪುಟ್: ಒಡಿಶಾದ ಕೋರಾಪುಟ್ ಜಿಲ್ಲೆಯಲ್ಲಿ ತುರ್ತು ಆಂಬುಲೆನ್ಸ್ ಸೇವೆ ಒದಗಿಸುವ 102 ಹಾಗೂ 108 ನಂಬರ್ ಗಳಿಗೆ ಕರೆ ಮಾಡಿದರೆ ಯಾರೂ ಕರೆಯನ್ನು ಸ್ವೀಕರಿಸದ ಪರಿಣಾಮ ಗರ್ಭಿಣಿಯೊಬ್ಬರಿಗೆ ರಸ್ತೆಯಲ್ಲೇ ಹೆರಿಗೆಯಾಗಿದೆ.

ಗಾಜಿಯಾಗುಡ ಎಂಬ ಗ್ರಾಮದಲ್ಲಿರುವ ಸೀತುಮಾಯಿ ಸಾವಂತ ಎಂಬ ಬುಡಕಟ್ಟು ಮಹಿಳೆಗೆ ಮಂಗಳ ವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಕೆಯ ಕುಟುಂಬದವರು ಆಂಬುಲೆನ್ಸ್ ಸೇವೆ ಒದಗಿಸುವ 102 ಹಾಗೂ 108 ನಂಬರ್ ಗಳಿಗೆ ಕರೆ ಮಾಡಿದ್ದಾರೆ. ಆದರೆ ದಸಮಂತ್ ಪುರ್ ಬ್ಲಾಕ್ ನ ಆರೋಗ್ಯ ಕೇಂದ್ರದಲ್ಲಿ ಯಾರೂ ಸಹ ಕರೆಯನ್ನು ಸ್ವೀಕರಿಸಲಿಲ್ಲ. ಹೆರಿಗೆ ನೋವು ಹೆಚ್ಚುತ್ತಿದ್ದಂತೆಯೇ ಗರ್ಭಿಣಿ ಮಹಿಳೆ 7 ಕಿಮಿ ದೂರವಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕುಟುಂಬ ಸದಸ್ಯರೊಂದಿಗೆ ನಡೆದೇ ಹೋಗಲು ನಿರ್ಧರಿಸಿದ್ದಾರೆ. ಆದರೆ ಹೆಚ್ಚು ದೂರ ನಡೆಯಲಿ ಅವರಿಗೆ ಸಾಧ್ಯವಾಗದೇ, ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ರಾಯ್ ಗಢದಲ್ಲಿ ಕಳೆದ ವಾರ ಇಂತಹದ್ದೇ ಪ್ರಕರಣ ನಡೆದಿತ್ತು. ಹಿಕಾಕ ಕುಂದುಂಜಿ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ಪತಿ ಆಂಬುಲೆನ್ಸ್ ಗೆ ಕರೆ ಮಾಡಿದ್ದರು. ಆದರೆ ಯಾರೂ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಆಕೆಯ ಪತಿ ಗರ್ಭಿಣಿಯನ್ನು ದ್ವಿಚಕ್ರವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು ನಂತರ ಮಾರ್ಗ ಮಧ್ಯದಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com