
ನವದೆಹಲಿ: ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪ್ರಾಪ್ತ ಸಂತ್ರಸ್ತೆ, ಉತ್ತರ ಪ್ರದೇಶ ಸಚಿವ ಅಜಂ ಖಾನ್ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾಳೆ.
ಬುಲಂದಶಹರ್ ಘಟನೆ ವಿರೋಧ ಪಕ್ಷಗಳ ‘ರಾಜಕೀಯ ಪಿತೂರಿ’ಎಂದು ಹೇಳುವ ಮೂಲಕ ಖಾನ್ ಭಾರಿ ವಿವಾದವನ್ನು ಹುಟ್ಟು ಹಾಕಿದ್ದರು.
ಈ ಸಂಬಂಧ ಸುಪ್ರೀಂಕೋರ್ಟಿನಲ್ಲಿ ಮನವಿ ಸಲ್ಲಿಸಿರುವ ಆಕೆ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಮತ್ತು ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಯಬೇಕು, ತನಗೆ ಶಾಲೆಗೆ ಹೋಗಲು ವ್ಯವಸ್ಥೆಯಾಗಬೇಕು ಮತ್ತು ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಲ್ಲರಿಗೂ ಮರುವಸತಿ ಕಲ್ಪಿಸಬೇಕು ಎಂದು ಕೋರಿದ್ದಾಳೆ.
ಬುಲಂದ ಶಹರ್ನಲ್ಲಿ ಸುಮಾರು 15ಕ್ಕೂ ಹೆಚ್ಚು ಮಂದಿ ದರೋಡೆಕೋರರು ಇಡೀ ಕುಟುಂಬದ ಸದಸ್ಯರನ್ನು ವಾಹನದಲ್ಲಿ ಹೋಗುತ್ತಿದ್ದಾಗ ತಡೆದು ಹೊಲವೊಂದಕ್ಕೆ ಹೋಗುವಂತೆ ಮಾಡಿ ಕುಟುಂಬ ಸದಸ್ಯರ ಕಣ್ಣೆದುರಲ್ಲೇ ತಾಯಿ ಮತ್ತು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅವರ ಬಳಿ ಇದ್ದ ಚಿನ್ನಾಭರಣ, ನಗದು ಹಣವೆಲ್ಲವನ್ನೂ ದೋಚಿದ್ದರು.
ಅಲಹಾಬಾದ್ ಹೈಕೋರ್ಟ್ ಈಗಾಗಲೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
Advertisement