ಸ್ವತಂತ್ರ್ಯ ದಿನಾಚರಣೆ ಬೆನ್ನಲ್ಲೇ ಮತ್ತೆ ಬಾಲ ಬಿಚ್ಚಿದ ಪಾಕ್; ಪೂಂಛ್ ನಲ್ಲಿ ಗುಂಡಿನ ದಾಳಿ

ಪ್ರತೀ ಬಾರಿ ಸ್ವತಂತ್ರ್ಯ ದಿನಾಚರಣೆಗೂ ಮುನ್ನ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರತ್ತ ಗುಂಡು ಹಾರಿಸುವ ತಮ್ಮ ಪರಿಪಾಠವನ್ನು ಈ ಬಾರಿಯೂ ಮುಂದುವರೆಸಿದ್ದು, ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.
ಪೂಂಛ್ ಸೆಕ್ಟರ್ ನಲ್ಲಿ ಗುಂಡಿನ ಚಕಮಕಿ (ಸಂಗ್ರಹ ಚಿತ್ರ)
ಪೂಂಛ್ ಸೆಕ್ಟರ್ ನಲ್ಲಿ ಗುಂಡಿನ ಚಕಮಕಿ (ಸಂಗ್ರಹ ಚಿತ್ರ)

ಶ್ರೀನಗರ: ಪ್ರತೀ ಬಾರಿ ಸ್ವತಂತ್ರ್ಯ ದಿನಾಚರಣೆಗೂ ಮುನ್ನ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರತ್ತ ಗುಂಡು ಹಾರಿಸುವ ತಮ್ಮ ಪರಿಪಾಠವನ್ನು ಈ  ಬಾರಿಯೂ ಮುಂದುವರೆಸಿದ್ದು, ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಭಾರತೀಯ ಪಡೆಗಳು ಕೂಡ ದಿಟ್ಟ ಉತ್ತರ ನೀಡಿದ್ದು, ಪಾಕ್ ಯೋಧರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಕೂಡ ನಿರಂತರ ಗುಂಡಿನ ಪ್ರತಿದಾಳಿ  ನಡೆಸುತ್ತಿದೆ. ಇನ್ನು ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ಲಘು ಸ್ವಯಂ ಚಾಲಿತ ಆರ್ಟಿಲರಿ ಗನ್ ಗಳಿಂದ ಭಾರತೀಯ ಪೋಸ್ಟ್ ಗಳತ್ತ ದಾಳಿ ನಡೆಸುತ್ತಿದ್ದು, ಶೆಲ್ ನಡೆಸುತ್ತಿದ್ದಾರೆ ಎಂದು  ಲೆಫ್ಟಿನೆಂಟ್ ಕರ್ನಲ್ ಮನೀಶ್ ಮೆಹ್ತಾ ಹೇಳಿದ್ದಾರೆ.

ಭಾನುವಾರ ಬೆಳಗಿನ ಜಾವ ಆರಂಭವಾದ ಗುಂಡಿನ ದಾಳಿ ಈ ವರೆಗೂ ಮುಂದುವರೆದಿದ್ದು, ಪಾಕಿಸ್ತಾನಿ ಸೈನಿಕರಿಗೆ ಭಾರತೀಯ ಯೋಧರು ಪ್ರತಿದಾಳಿ ಮೂಲಕ ಪ್ರತಿ ದಾಳಿ ನಡೆಸಿದ್ದಾರೆ.   ಇನ್ನು ನಿನ್ನೆ ಸಂಜೆ ವೇಳೆಯಲ್ಲಿ ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿಕೊಂಡು  ಕೆಲ ಶಂಕಿತರು ಗ್ರೆನೇಡ್ ದಾಳಿ ನಡೆಸಿದ್ದರು. ಈ ವೇಳೆ 10ಕ್ಕೂ ಅಧಿಕ ಯಾತ್ರಾರ್ಥಿಗಳು  ಗಾಯಗೊಂಡಿದ್ದರು. ಯಾತ್ರಾರ್ಥಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಪರಾರಿಯಾಗುತ್ತಿದ್ದ ಮೂವರ ಪೈಕ ಭಾರತೀಯ ಯೋಧರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬಂಧಿತರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

1990ರಿಂದಲೂ ಸ್ವತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪಾಕಿಸ್ತಾನಿ ಪಡೆಗಳು ಭಾರತೀಯ ಯೋಧರತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸಿಕೊಂಡು ಬಂದಿವೆ. ಈ ಬಾರಿಯೂ ಪಾಕಿಸ್ತಾನದ  ಈ ಚಾಳಿ ಮುಂದುವರೆದಿದ್ದು ಸ್ವತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮತ್ತೆ ಪಾಕಿಸ್ತಾನ ಭಾರತೀಯ ಯೋಧರತ್ತ ಗುಂಡಿನ ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com