ತಾಯಂದಿರಿಗೆ 26 ವಾರಗಳ ಹೆರಿಗೆ ರಜೆ: ಸಚಿವೆ ಮನೇಕಾ ಗಾಂಧಿಗೆ ಹರಿದು ಬರುತ್ತಿರುವ ಪತ್ರಗಳು

ಖಾಸಗಿ ವಲಯದಲ್ಲಿ ಕೆಲಸ ಮಾಡುವ ಹೆಂಗಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಮಸೂದೆ ಕಳೆದ ವಾರ ಲೋಕಸಭೆಯಲ್ಲಿ ಅನುಮೋದನೆಗೊಂಡು...
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮನೇಕಾ ಗಾಂಧಿ(ಸಂಗ್ರಹ)
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮನೇಕಾ ಗಾಂಧಿ(ಸಂಗ್ರಹ)
ನವದೆಹಲಿ: ಖಾಸಗಿ ವಲಯದಲ್ಲಿ ಕೆಲಸ ಮಾಡುವ ಹೆಂಗಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಮಸೂದೆ ಕಳೆದ ವಾರ ಲೋಕಸಭೆಯಲ್ಲಿ ಅನುಮೋದನೆಗೊಂಡು ರಾಜ್ಯಸಭೆಗೆ ಹೋಗಿ ಅಲ್ಲಿ ಕಳೆದ ವಾರ ಒಪ್ಪಿಗೆ ಸಿಕ್ಕಿ ಮತ್ತೆ ಲೋಕಸಭೆಯಲ್ಲಿ ಸಮಯದ ಅಭಾವದಿಂದ ಅಂಗೀಕಾರ ಸಿಕ್ಕಿರಲಿಲ್ಲ. ಇದು ಅನೇಕ ಹೆಂಗಳೆಯರ ಕೋಪ, ಅಸಮಾಧಾನಕ್ಕೆ ಕಾರಣವಾಗಿದೆ. ಮಗುವಿನ ನಿರೀಕ್ಷೆಯಲ್ಲಿರುವ ಅನೇಕ ತಾಯಂದಿರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮನೇಕಾ ಗಾಂಧಿಗೆ ಪತ್ರ ಬರೆದು ತಮ್ಮ ಅಸಮಾಧಾನ ಹಂಚಿಕೊಂಡಿದ್ದಾರೆ.
''ಮಸೂದೆ ಲೋಕಸಭೆಗೆ ಬರಲಿಲ್ಲ. ಹಾಗಾಗಿ ನಾವು ಚಳಿಗಾಲ ಅಧಿವೇಶನದವರೆಗೆ ಕಾಯಬೇಕು'' ಎಂದರು ಮನೇಕಾ ಗಾಂಧಿ.ಆದರೆ ಅದಕ್ಕೆ ಮುಂಚೆ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಪೋಷಕರು ಮನೇಕಾ ಅವರಿಗೆ ಇ-ಮೇಲ್ ಕಳುಹಿಸಿ ಶಾಸನದ ಸ್ಥಿತಿಗತಿ ಬಗ್ಗೆ ವಿಚಾರಿಸಿದ್ದಾರೆ.
ಮನೇಕಾ ಗಾಂಧಿಯವರ ಇನ್ ಬಾಕ್ಸ್ ಗೆ 200ಕ್ಕೂ ಅಧಿಕ ಮೇಲ್ ಪತ್ರಗಳು ಬಂದು ಬಿದ್ದಿವೆ. ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಿ ಮಸೂದೆ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆದ ನಂತರ ಅನೇಕ ತಾಯಂದಿರಿಗೆ ಕುತೂಹಲ ಹೆಚ್ಚಾಗಿದೆ.
ಹೆರಿಗೆಯ ವಿವಿಧ ಸಮಯಗಳಲ್ಲಿರುವ ತಾಯಂದಿರು, ಮಕ್ಕಳ ತಂದೆಯಂದಿರು, ದತ್ತು ತಾಯಂದಿರು ಸಚಿವೆಗೆ ಪ್ರಶ್ನೆ ಕೇಳುತ್ತಿದ್ದಾರೆ. ಒಬ್ಬ ತಾಯಿ ಇ-ಮೇಲ್ ಮಾಡಿ, ನಾನು ಎಂಟು ತಿಂಗಳ ಗರ್ಭಿಣಿ. ನನಗೆ ಸೆಪ್ಟೆಂಬರ್ 5ರಿಂದ ರಜೆ ಬೇಕು. ನಾನು ನನ್ನ ಕಂಪೆನಿಯಲ್ಲಿ ಹೆರಿಗೆ ರಜೆಯ ಸೌಲಭ್ಯ ಕೇಳಿದಾಗ, ಮಸೂದೆ ಅನುಮೋದನೆಗೊಂಡು ಜಾರಿಗೆ ಬಂದಿಲ್ಲ. ಒಂದು ವೇಳೆ ಅನುಮೋದನೆಗೊಂಡರು ಕೂಡ ಮಾರ್ಚ್ 2017ರಿಂದ ಜಾರಿಗೆ ಬರುತ್ತದೆ, ಹೌದೇ'' ಎಂದು ಕೇಳಿದ್ದಾರೆ.
ಮತ್ತೊಂದು ಇ ಮೇಲ್ ನಲ್ಲಿ ''ನನ್ನ ಪತ್ನಿ ಮಗುವಿನ ಹೆರಿಗೆ ನಿರೀಕ್ಷೆಯಲ್ಲಿದ್ದು, ಯಾವಾಗ ಈ ಮಸೂದೆ ಜಾರಿಗೆ ಬರುತ್ತದೆ ಎಂದು ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ'' ಎಂದಿದ್ದಾರೆ.
ಮತ್ತೊಬ್ಬ ಇಬ್ಬರು ಮಕ್ಕಳ ತಾಯಿ, ಭವಿಷ್ಯದ ತಾಯಂದಿರ ಪರವಾಗಿ ಮಸೂದೆ ಜಾರಿಗೆ ಬರುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ದತ್ತು ಮಗುವನ್ನು ಪಡೆದ ತಾಯಿ ತಿದ್ದುಪಡಿ ಮಸೂದೆಯಲ್ಲಿ ದತ್ತು ಮತ್ತು ಬಾಡಿಗೆ ಪಡೆದ  ತಾಯಂದಿರಿಗೆ ಸೂಚಿಸಿರುವ 12 ವಾರಗಳ ಹೆರಿಗೆ ರಜೆ ಸಾಲದು. ಇನ್ನು ಹೆಚ್ಚು ರಜೆ ಬೇಕೆಂದು ಮತ್ತೊಬ್ಬ ಮಹಿಳೆ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com