ಗುಜರಾತ್ ನ ಉನಾದಲ್ಲಿ ಮತ್ತೆ ದಲಿತರ ಮೇಲೆ ಹಲ್ಲೆ

ಕಳೆದ ತಿಂಗಳು ಗುಜರಾತ್ ರಾಜ್ಯದ ಗಿರ್ ಸೋಮನಾಥ್ ಜಿಲ್ಲೆಯ ಉನಾದಲ್ಲಿ ಗೋ ರಕ್ಷಕರಿಂದ ದಲಿತರ...
ಗುಜರಾತ್ ನ ಉನಾದಲ್ಲಿ ನಿನ್ನೆ ದಲಿತ ಸಮುದಾಯದವರು ಹಮ್ಮಿಕೊಂಡಿದ್ದ ಐಕಮತ್ಯ ರ್ಯಾಲಿಯಲ್ಲಿ ಜೆಎನ್ ಯುಎಸ್ ಯು ವಿದ್ಯಾರ್ಥಿ ಘಟಕದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಇತರ ದಲಿತ ಮುಖಂಡ
ಗುಜರಾತ್ ನ ಉನಾದಲ್ಲಿ ನಿನ್ನೆ ದಲಿತ ಸಮುದಾಯದವರು ಹಮ್ಮಿಕೊಂಡಿದ್ದ ಐಕಮತ್ಯ ರ್ಯಾಲಿಯಲ್ಲಿ ಜೆಎನ್ ಯುಎಸ್ ಯು ವಿದ್ಯಾರ್ಥಿ ಘಟಕದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಇತರ ದಲಿತ ಮುಖಂಡ
Updated on
ಅಹ್ಮದಾಬಾದ್: ಕಳೆದ ತಿಂಗಳು ಗುಜರಾತ್ ರಾಜ್ಯದ ಗಿರ್ ಸೋಮನಾಥ್ ಜಿಲ್ಲೆಯ ಉನಾದಲ್ಲಿ ಗೋ ರಕ್ಷಕರಿಂದ ದಲಿತರ ಮೇಲೆ ಹಲ್ಲೆಯಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಘಟನೆ ಇನ್ನೂ ತಣ್ಣಗಾಗಿಲ್ಲ. ಆಗಲೇ ದಲಿತರ ಮೇಲೆ ಮತ್ತೊಂದು ಅಂತಹದ್ದೇ ಹಲ್ಲೆ ಪ್ರಕರಣ ನಿನ್ನೆ ಮರುಕಳಿಸಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ ಸುಮಾರು 20 ಮಂದಿ ದಲಿತರ ಮೇಲೆ ಗುಂಪೊಂದು ಅಕ್ರಮವಾಗಿ ಹಲ್ಲೆ ನಡೆಸಿದ ಪರಿಣಾಮ 8 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ ನ ಗಿರ್ ಸೋಮನಾಥ್ ಜಿಲ್ಲೆಯ ಉನಾ ಪಟ್ಟಣದ ಸಮ್ತರ್ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಆಗ ಅಲ್ಲಿ ಅಪಾರ ಸಂಖ್ಯೆಯಲ್ಲಿ ಜನಸಮೂಹ ಸೇರಿದ್ದು, ಅದನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ ಲಾಠಿ ಚಾರ್ಜ್ ಮಾಡಬೇಕಾದ ಪರಿಸ್ಥಿತಿ ಬಂತು. ಪೊಲೀಸರು ತಮಗೆ ಏನೂ ಸಹಾಯ ಮಾಡಲಿಲ್ಲ ಎಂದು ಗಾಯಗೊಂಡ ದಲಿತರು ಆರೋಪಿಸಿದ್ದಾರೆ.
ದಾಳಿಕೋರರು ಸಮ್ತರ್ ಗ್ರಾಮದವರಾಗಿದ್ದು, ಕಳೆದ ತಿಂಗಳು ಉನಾದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 12 ಮಂದಿಯನ್ನು ಬಂಧಿಸಿರುವುದನ್ನು ಖಂಡಿಸಿ ಅದಕ್ಕೆ ಪ್ರತೀಕಾರ ತೀರಿಸಲು ಹಲ್ಲೆ ನಡೆಸಿದ್ದಾರೆ ಎಂದು ಘಟನೆಯಲ್ಲಿ ಗಾಯಗೊಂಡವರು ಹೇಳಿದ್ದಾರೆ.
ಹಲ್ಲೆಗೀಡಾದ 20 ಮಂದಿ ಭಾವನಗರ ಜಿಲ್ಲೆಯವರಾಗಿದ್ದು, ಉನಾಗೆ ಬೈಕ್ ನಲ್ಲಿ ತೆರಳಿದ್ದರು. ಜೆಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕ ಕನ್ನಯ್ಯ ಕುಮಾರ್, ಹೈದರಾಬಾದ್ ನಲ್ಲಿ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ಮತ್ತು ಉನಾ ದಲಿತರ ಮೇಲಿನ ಹಲ್ಲೆ ಪ್ರಕರಣದಲ್ಲಿ ಹಲ್ಲೆಗೀಡಾದವನ ತಂದೆ ಬಾಲು ಸರ್ವೈಯ ಮೊದಲಾದವರು ಸೇರಿದ್ದ ನಿನ್ನೆಯ ಸ್ವಾತಂತ್ರ್ಯ ದಿನಾಚರಣೆ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಕಳೆದ ತಿಂಗಳು ಹಸುವಿನ ಮಾಂಸ ಸುಲಿಯುತ್ತಿದ್ದರು ಎಂದು ಗೋ ರಕ್ಷಕರಿಂದ ಹಲ್ಲೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ನಿನ್ನೆಯ ಘಟನೆ ಕೂಡ ನಡೆದಿದೆ.ಸಮ್ತರ್ ಗ್ರಾಮದವರು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿಯೊಬ್ಬ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com