

ನವದೆಹಲಿ: ರಾಷ್ಟ್ರದ್ರೋಹ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಈ ಕಾನೂನನ್ನು ರದ್ದುಗೊಳಿಸಬೇಕೆಂದು ಕಾಮನ್ ಕಾಸ್ ಎಂಬ ಎನ್ ಜಿಒ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳ, ಪತ್ರಕರ್ತರ, ಬುದ್ಧಿಜೀವಿಗಳ ವಿರುದ್ಧ ದೇಶದ್ರೋಹದ ಕಾನೂನನ್ನು ದುರುಪಯೋಗಪಡಿಸುತ್ತಿವೆ ಎಂದು ಎನ್ ಜಿ ಒ ಆರೋಪಿಸಿದ್ದು, ದುರುಪಯೋಗವಾಗುತ್ತಿರುವ ಕಾನೂನನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದೆ. ಎನ್ ಜಿ ಒ ಸಲ್ಲಿಸಿರುವ ಅರ್ಜಿಯಲ್ಲಿ ಜೆಎನ್ ಯು ಪ್ರಕರಣ, ದೆಹಲಿ ವಿವಿ ಪ್ರಾಧ್ಯಾಪಕ ಎಸ್ಎಆರ್ ಗಿಲಾನಿ, ಅವರ ಪ್ರಕರಣಗಳನ್ನು ಉದಾಹರಿಸಲಾಗಿದೆ.