ದೆಹಲಿಯಲ್ಲಿ ಹೊಸ ಮದ್ಯದ ಅಂಗಡಿಗಳಿಗೆ ಅನುಮತಿ ಇಲ್ಲ: ಕೇಜ್ರಿವಾಲ್

ಹೊಸ ಮದ್ಯದ ಅಂಗಡಿಗಳಿಗೆ ಅನುಮತಿಯನ್ನು ಸ್ಪಷ್ಟವಾಗಿ ನಿರಾಕರಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈಗಿರುವ ಮದ್ಯದ ಅಂಗಡಿಗಳ ಭವಿಷ್ಯವನ್ನು ಸ್ಥಳೀಯ ಜನರೇ ನಿರ್ಧರಿಸುತ್ತಾರೆ...
ದೆಹಲಿಯಲ್ಲಿ ಹೊಸ ಮದ್ಯದ ಅಂಗಡಿಗಳಿಗೆ ಅನುಮತಿ ಇಲ್ಲ: ಕೇಜ್ರಿವಾಲ್

ನವದೆಹಲಿ: ಹೊಸ ಮದ್ಯದ ಅಂಗಡಿಗಳಿಗೆ ಅನುಮತಿಯನ್ನು ಸ್ಪಷ್ಟವಾಗಿ ನಿರಾಕರಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈಗಿರುವ ಮದ್ಯದ ಅಂಗಡಿಗಳ ಭವಿಷ್ಯವನ್ನು ಸ್ಥಳೀಯ ಜನರೇ ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.

ಜನತೆಗೆ ಮದ್ಯದ ಅಂಗಡಿಗಳಿಂದ ಕಿರಿಕಿರಿ ಉಂಟಾಗುತ್ತಿದ್ದರೆ ಮೊಹಲ್ಲಾ ಸಭೆಗಳು ಮದ್ಯದ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಹಾಗೂ ಮುಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಿವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಮದ್ಯದ ಅಂಗಡಿಗಳ ಬಗ್ಗೆ ನಡೆಯುವ ಸಭೆಗಳಲ್ಲಿ ಆಯಾ ಮತಕ್ಷೇತ್ರದ ಶೇ.15 ರಷ್ಟು ಜನರು ಇರಬೇಕು ಅದರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಇರಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಮದ್ಯದ ಅಂಗಡಿಗಳು ಅಂಗಡಿಗಳ ಎದುರು ಗದ್ದಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು, ಒಂದು ವೇಳೆ ಅಕ್ರಮ ಚಟುವಟಿಕೆ, ಗದ್ದಲ ಉಂಟಾದಲ್ಲಿ ಮದ್ಯದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com