25 ಲಕ್ಷ ಹಣ ಪಡೆದು ವ್ಯಕ್ತಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಿದ್ಯಾರ್ಥಿನಿ ಬಂಧನ

25 ಲಕ್ಷ ಹಣ ನೀಡುವಂತೆ ಬೆದರಿಕೆ ಒಡ್ಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ರಾಜಸ್ತಾನ ಪೊಲೀಸರು ಬಂಧಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೈಪುರ: 25 ಲಕ್ಷ ಹಣ ನೀಡುವಂತೆ ಬೆದರಿಕೆ ಒಡ್ಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ರಾಜಸ್ತಾನ ಪೊಲೀಸರು ಬಂಧಿಸಿದ್ದಾರೆ.

ಗುರಗಾವ್ ಮೂಲದ ವ್ಯಕ್ತಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಉಷಾ ಗುರ್ಜಾರ್ ಕಳೆದ ವರ್ಷ ರೋಹ್ಟಕ್ ನಲ್ಲಿ ಪರಿಚಯವಾಗಿತ್ತು.ಆಗಸ್ಟ್ 8 ರಂದು ವ್ಯಕ್ತಿ ಜೈಪುರಕ್ಕೆ ಬಂದು ಹೊಟೆಲ್ ನಲ್ಲಿ ರೂಂ ಮಾಡಿಕೊಂಡಿದ್ದರು. ಅಂದು ರಾತ್ರಿ ಆ ವ್ಯಕ್ತಿಯ ಜೊತೆ ರೂಂ ನಲ್ಲಿ ಕಳೆದಿದ್ದಳು. ಬೆಳಗ್ಗೆ ಎದ್ದ ನಂತರ 25 ಲಕ್ಷ ಹಣ ನೀಡುವಂತೆ ಕೇಳಿದ್ದಾಳೆ. ಹಣ ನೀಡದಿದ್ದರೇ ಆತನ ವ್ಯಕ್ತಿತ್ವಕ್ಕೆ ಧಕ್ಕೆ ತರುವುದಾಗಿ ಬೆದರಿಸಿದ್ದಾಳೆ.

ಹಣವನ್ನು ಹೊಂದಿಸಿದ ಆತ ಆಕೆಗೆ ನೀಡಿ ಮತ್ತೆ ಬ್ಲ್ಯಾಕ್ ಮೇಲ್ ಮಾಡದಂತೆ ಪ್ರಮಾಣ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾನೆ. ಅದಕ್ಕೆ ಒಪ್ಪಿ ಆಕೆಯ ಸಹಿ ಮಾಡಿಕೊಟ್ಟಿದ್ದಾಳೆ.

ಮತ್ತೆ ನಿನ್ನೆ ವ್ಯಕ್ತಿಗೆ ಕರೆ ಮಾಡಿದ ಆಕೆ 18 ಲಕ್ಷ ಹಣವನ್ನು ನೀಡುವಂತೆ ಬೆದರಿಕೆ ಹಾಕಿದ್ದಾಳೆ. ಆ ನಂತರ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದಾನೆ. ನಂತರ ಆಕೆಗೆ 2 ಲಕ್ಷ ಹಣವನ್ನು ನೀಡಿದ್ದಾನೆ. ಆಕೆ ಹಣವನ್ನು ಎಣಿಸುವಾಗ ಪೊಲೀಸರ ಬಂಧಿಸಿದ್ದಾರೆ.

ಲಾಲ್ಕೊತಿಯ ಪಿಜಿ ಯಲ್ಲಿದ್ದ ಆಕೆ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಾಳೆ. ಹಾಸ್ಟೆಲ್ ನ ಆಕೆಯ ಕೊಠಡಿಯಿಂದ 25 ಲಕ್ಷ ಹಣನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com