ಸಿಯಾಚಿನ್ ನಲ್ಲಿ ಯೋಧರೊಂದಿಗೆ ರಕ್ಷಾ ಬಂಧನ ಆಚರಿಸಿದ ಸ್ಮೃತಿ ಇರಾನಿ

ಇದೊಂದು ಹೃದಯಸ್ಪರ್ಶಿ ಆತಿಥ್ಯ ಅಂತಾನೇ ಹೇಳಬಹುದು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗುರುವಾರ ಜಮ್ಮು ಮತ್ತು ಕಾಶ್ಮೀರದ...
ಯೋಧರಿಗೆ ರಾಖಿ ಕಟ್ಟುತ್ತಿರುವ ಸ್ಮೃತಿ ಇರಾನಿ
ಯೋಧರಿಗೆ ರಾಖಿ ಕಟ್ಟುತ್ತಿರುವ ಸ್ಮೃತಿ ಇರಾನಿ
Updated on: 
ನವದೆಹಲಿ: ಇದೊಂದು ಹೃದಯಸ್ಪರ್ಶಿ ಆತಿಥ್ಯ ಅಂತಾನೇ ಹೇಳಬಹುದು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗುರುವಾರ ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಸೈನಿಕರೊಂದಿಗೆ ರಕ್ಷಾ ಬಂಧನ ಆಚರಿಸಿದರು.
ಭಾರತೀಯ ವಾಯು ಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಔಟ್ ಪೊಸ್ಟ್ ತೆರಳಿದ ಸ್ಮೃತಿ ಇರಾನಿ ಯೋಧರೊಂದಿಗೆ ರಕ್ಷಾ ಬಂಧನ ಆಚರಿಸಿದರು.
ಗಡಿ ಕಾಯುತ್ತಿದ್ದ ಸುಮಾರು 20 ಯೋಧರಿಗೆ ಕೇಂದ್ರ ಸಚಿವೆ ವೈಯಕ್ತಿಕವಾಗಿ ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯ ಕೋರಿದರು. ಅಲ್ಲದೆ ಮನೆಯಲ್ಲಿ ಮಾಡಿದ ವಿಶೇಷ ಸಿಹಿ-ತಿಂಡಿಗಳನ್ನು ಸೈನಿಕರಿಗೆ ಹಂಚಿದರು. 
ಈ ವೇಳೆ ಮಾತನಾಡಿದ ಸ್ಮೃತಿ ಇರಾನಿ, ದೇಶದ ಗಡಿ ಕಾಯುವ ನನ್ನ ಸಹೋದರರೊಂದಿಗೆ ರಕ್ಷಾ ಬಂಧನ ಆಚರಿಸಿದ್ದು ನನ್ನ ಭಾಗ್ಯ. ಇದೊಂದು ಅವಿಸ್ಮರಣಿಯ ಕ್ಷಣ ಎಂದು ಹೇಳಿದರು.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಮಾನವ ಸಂಪನ್ಮೂಲ ಸಚಿವೆ ಉಮಾ ಭಾರತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಸಹ ಭಾರತದ ಗಡಿ ಪ್ರದೇಶಗಳಿಗೆ ಭೇಟಿ ನೀಡಿ, ಯೋಧರೊಂದಿಗೆ ರಕ್ಷಾ ಬಂಧನ ಆಚರಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com