"ನನ್ನನ್ನು ಹಿಡಿದ ಅಧಿಕಾರಿಗೆ ಸೆಲ್ಯೂಟ್": 'ಕಿಲ್ಲರ್ ಡಾಕ್ಟರ್' ಸಂತೋಷ್ ಪೊಲ್

"ನನ್ನಂಥಹ ಅಪರಾಧಿಯನ್ನು ಹಿಡಿದ ಪೊಲೀಸ್ ಅಧಿಕಾರಿಗೆ ನನ್ನ ಹೃದಯಪೂರ್ವಕ ಸೆಲ್ಯೂಟ್" ಇದು ವೈದ್ಯನಾಗಿದ್ದುಕೊಂಡು ಆರು ಮಂದಿಯ ಧಾರುಣ ಹತ್ಯೆ ಮಾಡಿ ಫಾರ್ಮ್ ಹೌಸ್ ನಲ್ಲಿ ನಿಗೂಢವಾಗಿ ಹೂತಿಟ್ಟಿದ್ದ ಸತಾರಾ ವೈದ್ಯ ಸಂತೋಷ್ ಗುಲಾಬ್ ರಾವ್ ಪೊಲ್ ನ ಮನದಾಳದ ಮಾತು.
ಸಿರಿಯಲ್ ಕಿಲ್ಲರ್ ಡಾಕ್ಟರ್ ಸಂತೋಷ್ ಪೊಲ್ (ಸಂಗ್ರಹ ಚಿತ್ರ)
ಸಿರಿಯಲ್ ಕಿಲ್ಲರ್ ಡಾಕ್ಟರ್ ಸಂತೋಷ್ ಪೊಲ್ (ಸಂಗ್ರಹ ಚಿತ್ರ)

ಸತಾರಾ: "ನನ್ನಂಥಹ ಅಪರಾಧಿಯನ್ನು ಹಿಡಿದ ಪೊಲೀಸ್ ಅಧಿಕಾರಿಗೆ ನನ್ನ ಹೃದಯಪೂರ್ವಕ ಸೆಲ್ಯೂಟ್" ಇದು ವೈದ್ಯನಾಗಿದ್ದುಕೊಂಡು ಆರು ಮಂದಿಯ ಧಾರುಣ ಹತ್ಯೆ ಮಾಡಿ ಫಾರ್ಮ್  ಹೌಸ್ ನಲ್ಲಿ ನಿಗೂಢವಾಗಿ ಹೂತಿಟ್ಟಿದ್ದ ಸತಾರಾ ವೈದ್ಯ ಸಂತೋಷ್ ಗುಲಾಬ್ ರಾವ್ ಪೊಲ್ ನ ಮನದಾಳದ ಮಾತು.

ಈ ನಿಗೂಢ ಪ್ರಕರಣವನ್ನು ಬೇಧಿಸಿದ ಮಹಾರಾಷ್ಟ್ರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ಅವರಿಗೆ ಕೈಬರಹದ ಪತ್ರ ಬರೆದಿರುವ ಡಾ.ಡೆತ್ ಸಂತೋಷ್ ಪೊಲ್, ಪ್ರಕರಣವನ್ನು  ಭೇದಿಸಿದ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳನ್ನು ಶ್ಲಾಘಿಸಿದ್ದಾನೆ. ಅಂತೆಯೇ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಎತ್ತಿ ಹಿಡಿದಿರುವ ಸಂತೋಶಷ್ ಪೊಲ್, ತನ್ನ ಈ ಕೃತ್ಯವನ್ನು ಮೊದಲೇ  ಅಧಿಕಾರಿಗಳು ತಡೆದಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಗುತ್ತಿರಲಿಲ್ಲ. ಲಂಚ ಪಡೆದ ಅಧಿಕಾರಿಗಳು  ನನ್ನನ್ನು ಮತ್ತಷ್ಟು ಅಪರಾಧ ಮಾಡುವಂತೆ ಪರೋಕ್ಷವಾಗಿ ಪ್ರೇರೇಪಿಸಿದರು ಎಂದು  ಹೇಳಿದ್ದಾನೆ.

ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಸಂತೋಷ್ ಪೊಲ್, "ಎಸ್ ಪಿ ಸರ್, ಮೊದಲಿಗೆ ನಿಮಗೆ ನನ್ನ ದೊಡ್ಡ ಸಲಾಂ, ಸರ್ ನೀವು ನನ್ನನ್ನು ಇಷ್ಟು ಕೊಲೆಗಳನ್ನು ಏಕೆ ಮಾಡಿದೆ ಎಂದು ಕೇಳಿದರೆ, ಆಗ ಖಂಡಿತವಾಗಿಯೂ ನೀವು ನಿಮ್ಮ ಭ್ರಷ್ಟ ಅಧಿಕಾರಿಗಳನ್ನು ಮತ್ತು ಭ್ರಷ್ಟ ಸಮಾಜವನ್ನು ಪ್ರಶ್ನಿಸಬೇಕಾಗುತ್ತದೆ. 2003 ರಿಂದ 2016 ಈ ಕೊಲೆಗಳು ನಡೆದಿದ್ದು, 2003ರಲ್ಲಿ ಮೊದಲ  ಪ್ರಕರಣದಲ್ಲೇ ನನ್ನನ್ನು ಪೊಲೀಸರು ತಡೆದಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಕರಣವಾಗುತ್ತಿರಲಿಲ್ಲ ಎಂದು ಹೇಳಿದ್ದಾನೆ.

ಇನ್ನು ಸಂತೋಷ್ ಪೊಲ್ ಬರೆದಿರುವ ಪತ್ರದಲ್ಲಿನ ಸಂಪೂರ್ಣ ಮಾಹಿತಿಯನ್ನು ಪೊಲೀಸರು ನಿರಾಕರಿಸಲಾಗಿದೆಯಾದರೂ, ಪತ್ರದಲ್ಲಿ ಕಿಲ್ಲರ್ ಡಾಕ್ಟರ್ ತನ್ನ ಕುಕೃತ್ಯಗಳಿಗೆ ಹಣ ಪಡೆದು  ನೆರವಾದ ಸರ್ಕಾರಿ ಮತ್ತು ಪೊಲೀಸ್ ಅಧಿಕಾರಿಗಳ ಕುರಿತು ಮಾಹಿತಿ ನೀಡಿದ್ದಾನೆ ಎಂಬ ಶಂಕೆ ಮೂಡುತ್ತಿದೆ.

45 ವರ್ಷದ ವೈದ್ಯ ಸಂತೋಷ್ ಪೊಲ್ ಮಹಾರಾಷ್ಟ್ರದ ವಾಯ್ ನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದು, ಮಹಾಬಲೇಶ್ವ-ಪಂಚಾಗ್ನಿ ಪ್ರದೇಶದಲ್ಲಿ ಐವರು ಮಹಿಳೆಯರು ಹಾಗೂ ಓರ್ವ  ಪುರುಷನನ್ನು ಹತ್ಯೆಗೈದು ತನ್ನ ಫಾರ್ಮ್ ಹೌಸ್ ನಲ್ಲಿ ಬಚ್ಚಿಟ್ಟಿದ್ದ. ಇತ್ತೀಚೆಗಷ್ಟೇ ಈ ಹೈ ಪ್ರೊಫೈಲ್ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿ, ವೈದ್ಯ ಸಂತೋಷ್ ಪೊಲ್ ನನ್ನು  ಬಂಧಿಸಿದ್ದರು. ಅಲ್ಲದೆ ಬಳಿಕ ನಡೆದ ವಿಚಾರಣೆಯಲ್ಲೂ ವೈದ್ಯ ಸಂತೋಷ್ ಪೊಲ್ ತನ್ನ ಪಾಪ ಕೃತ್ಯಗಳನ್ನು ಒಪ್ಪಿಕೊಂಡಿದ್ದಾನೆ. ಕೆಲ ಮಹಿಳೆಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡು  ಕೊಲ್ಲಲಾಗಿದ್ದು, ಮತ್ತೆ ಕೆಲ ಮಹಿಳೆಯರಿಗೆ ತನ್ನ ಪಾಪಕೃತ್ಯಗಳ ತಿಳಿದ ಹಿನ್ನಲೆಯಲ್ಲಿ ಸಾಕ್ಷಿ ಹೇಳಬಾರದು ಎಂದು ಕೊಂದಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ಒಟ್ಟಾರೆ ಈ ಸೀರಿಯಲ್ ಕಿಲ್ಲರ್ ಡಾಕ್ಟರ್ ನನ್ನು ಬಂಧಿಸುವ ಮೂಲಕ ಮಹಾರಾಷ್ಟ್ರ ಪೊಲೀಸರು ಆಗಬಹುದಾಗಿದ್ದ ಮತ್ತಷ್ಟು ಅಪರಾಧಗಳನ್ನು ತಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com