
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿರುವ ಭಾರತೀಯ ವಾಯುಸೇನೆಯ ಎಎನ್-32 ವಿಮಾನದ ಅವಶೇಷಗಳು ಚೆನ್ನೈ ಕರಾವಳಿಯಲ್ಲಿ ಪತ್ತೆಯಾಗಿದ್ದು ಇವು ಎಎನ್-32 ವಿಮಾನದ್ದೆ ಎಂಬುದನ್ನು ಇನ್ನಷ್ಟೇ ದೃಢೀಕರಿಸಬೇಕಿದೆ.
ಚೆನ್ನೈ ಕರಾವಳಿಯಿಂದ 160 ನಾಟಿಕಲ್ ಮೈಲಿ ದೂರದ 3 ಸಾವಿರ ಮೀಟರ್ ಆಳದಲ್ಲಿ ಎಎನ್-32 ವಿಮಾನದ ಅವಶೇಷಗಳನ್ನು ಜಿಎಸ್ಐ ಹಡಗು ಸಮುದ್ರ ರತ್ನಾಕರ್ ಪತ್ತೆ ಹಚ್ಚಿದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ಕರಾವಳಿ ರಕ್ಷಣಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ವಿಮಾನದ ಕೆಲ ಅವಶೇಷಗಳು ಸಮುದ್ರದಲ್ಲಿ ಪತ್ತೆಯಾಗಿದ್ದು ಇದು ಜುಲೈ 22ರಂದು ನಾಪತ್ತೆಯಾಗಿದ್ದ ಎಎನ್-32 ವಿಮಾನದ ಅವಶೇಷಗಳೇ ಇರಬೇಕು ಎಂದು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ಸದ್ಯ ಅವಶೇಷಗಳನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಒಳಪಡಿಸಲಾಗುವುದು ಪರೀಕ್ಷಿಸಿದ ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಜುಲೈ 22ರಂದು 29 ಮಂದಿ ಸಿಬ್ಬಂದಿಯನ್ನು ಹೊತ್ತ ವಿಮಾನ ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿತ್ತು. ಈ ವಿಮಾನ ಚೆನ್ನೈನಿಂದ ಪೂರ್ವಕ್ಕೆ 280 ಕಿ,ಮೀ ದೂರ ಇರಬೇಕಾದರೆ ರೇಡಾರ್ ಸಂಪರ್ಕ ಕಡಿದುಕೊಂಡಿತ್ತು.
Advertisement