
ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಜಾಹಿದ್ ಮಿಯಾನ್ ವಿರುದ್ಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸೋಮವಾರ ಪೂರಕ ಚಾರ್ಜ್'ಶೀಟ್"ನ್ನು ದಾಖಲಿಸಿದ್ದಾರೆ.
ಉಗ್ರರ ವಿಧ್ವಂಸಕ ಕೃತ್ಯ ಹಾಗೂ ದಾಳಿ ತಂತ್ರಗಳಲ್ಲಿ ಜಾಹಿದ್ ಮಿಯಾನ್ ಪ್ರಮುಖ ಪಾತ್ರವಿದ್ದು, ದುಷ್ಕೃತ್ಯಗಳಲ್ಲಿ ಭಾಗಿಯಾಗಲು ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ. ಅಲ್ಲದೆ. 1993ರ ಮುಂಬೈ ಸ್ಫೋಟದಲ್ಲಿ ಪ್ರಮುಖನಾಗಿರುವ ಜಾವೆದ್ ಚಿಕ್ನನೊಂದಿಗೂ ಸಂಪರ್ಕದಲ್ಲಿದ್ದ ಎಂದು ಎನ್ಐಎ ಮಾಹಿತಿ ನೀಡಿದೆ.
ಜಾಹಿದ್ ಮಿಯಾನ್ ವಿರುದ್ಧ ಈಗಾಗಲೇ ಪೂರಕ ಚಾರ್ಜ್ ಶೀಟ್ ದಾಖಲಿಸಲಾಗಿದ್ದು, ಜಾವೆದ್ ಹಾಗೂ ಜಾಹಿದ್ ಇಬ್ಬರ ವಿರುದ್ಧವೂ ರೆಡ್ ಕಾರ್ನರ್ ನೋಟಿಸ್ ನ್ನು ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement