"ಹತಾಶೆಯಿಂದಾಡಿದ ಮಾತಿಗೆ ತಕ್ಕಶಾಸ್ತಿ": ಶೋಭಾ ಡೇ ವಿಷಾದ

ರಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಕಳಪೆ ಸಾಧನೆ ಕುರಿತಂತೆ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದ ಖ್ಯಾತ ಲೇಖಕಿ ಶೋಭಾ ಡೇ ತಮ್ಮ ಟ್ವೀಟ್ ಗೆ ಸಂಬಂಧಿಸಿದಂತೆ ವಿಷಾಧ ವ್ಯಕ್ತಪಡಿಸಿದ್ದಾರೆ.
ಅಂಕಣಗಾರ್ತಿ ಶೋಭಾ ಡೇ (ಸಂಗ್ರಹ ಚಿತ್ರ)
ಅಂಕಣಗಾರ್ತಿ ಶೋಭಾ ಡೇ (ಸಂಗ್ರಹ ಚಿತ್ರ)

ನವದೆಹಲಿ: ರಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಕಳಪೆ ಸಾಧನೆ ಕುರಿತಂತೆ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದ ಖ್ಯಾತ ಲೇಖಕಿ ಶೋಭಾ ಡೇ ತಮ್ಮ ಟ್ವೀಟ್ ಗೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿದ್ದಾರೆ.

ಭಾರತೀಯ ಒಲಿಂಪಿಕ್ಸ್ ಆಟಗಾರರು ನಿಷ್ಪ್ರಯೋಜಕ ಎಂಬರ್ಥದಲ್ಲಿ ಟ್ವೀಟ್ ಮಾಡಿ ಎಲ್ಲರ ಟೀಕೆಗೆ ಗುರಿಯಾಗಿದ್ದ ಶೋಭಾ ಡೇ ಕೊನೆಗೂ ಈ ಬಗ್ಗೆ ಮೌನ ಮುರಿದಿದ್ದು, ಭಾರತಕ್ಕೆ ಪದಕ  ಸಿಗುತ್ತಿಲ್ಲವಲ್ಲವೆಂಬ ಹತಾಶೆಯಲ್ಲಿ ತಾನು ಟ್ವೀಟ್ ಮಾಡಿದ್ದೆನಷ್ಟೇ..ಅದಕ್ಕೆ ನನಗೆ ಸರಿಯಾದ ಶಿಕ್ಷೆ ಸಿಕ್ಕಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ಈ ಬಗ್ಗೆ ಮಾತನಾಡಿದ ಶೋಭಾ ಡೇ, ನನ್ನ ಟ್ವೀಟ್ ನಲ್ಲಿ ಯಾವುದೇ ದುರುದ್ದೇಶ ಅಥವಾ ಕೆಡುಕಿನ ಭಾವನೆ ಇರಲಿಲ್ಲ. ಆಗಸ್ಟ್ 8ರಂದು ನಾನು ಮಾಡಿದ್ದು  ಇದೀಗ ವಿವಾದಕ್ಕೆ ಕಾರಣವಾಗಿದೆ. ಟ್ವೀಟ್ ಮಾಡುವಾಗ ನಾನು ಪ್ರತಿಕ್ರಿಯೆಗಳ ಲೆಕ್ಕಾಚಾರ ಮಾಡುವುದಿಲ್ಲ. ನನ್ನ ಹೃದಯದಿಂದ ನೇರವಾಗಿ ಹೇಳುತ್ತೇನೆ. ನನ್ನ ಹೇಳಿಕೆ ಕೆಲವೊಮ್ಮೆ  ಸರಿಯಾಗಿರುತ್ತದೆ. ಕೆಲವೊಮ್ಮೆ ಸರಿ ಇರುವುದಿಲ್ಲ. ಆದರೆ ಭಾರತ ಒಲಿಂಪಿಕ್ಸ್ ತಂಡ ಕುರಿತು ತಾನು ಮಾಡಿದ್ದ ಟ್ವೀಟ್ ತಿರುಗುಬಾಣವಾಯಿತು. ಅದಕ್ಕಾಗಿ ನನಗೆ ಶಿಕ್ಷೆಯಾಗುತ್ತಿದೆ. ನನ್ನ ಮಾನ  ಹರಾಜಾಗುತ್ತಿದೆ. ಟ್ವಿಟರ್ ನಲ್ಲಿ ನನ್ನ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಸಾರ್ವಜನಿಕ ನಿಂದನೆಗಿಂತ ದೊಡ್ಡ ಶಿಕ್ಷೆ ಇನ್ನೇನು ಬೇಕು?" ಎಂದು ಶೋಭಾ ಡೇ ಹೇಳಿದ್ದಾರೆ.

ನಾನು ಕೂಡ ಓರ್ವ ಅಥ್ಲೀಟ್, ಹೀಗಾಗಿ ಭಾರತ ತಂಡ ಪದಕ ಗಳಿಸುತ್ತಿಲ್ಲವಲ್ಲ ಎಂಬ ಹತಾಶೆಯಲ್ಲಿ ಆ ಮಾತುಗಳನ್ನ ಆಡಿದ್ದೆನಷ್ಟೇ..ಎಂದು ಶೋಭಾ ಹೇಳಿದ್ದಾರೆ.

ಇದೇ ವೇಳೆ ಭಾರತ ತಂಡ ಎರಡು ಪದಕಗಳನ್ನು ಗಳಿಸಿರುವುದನ್ನು ಸ್ವಾಗತಿಸಿರುವ ಶೋಭಾ, "ಎರಡು ಮೂರು, ಐದಾರು ಪದಕಗಳಿಂದ ತಾನು ತೃಪ್ತಿಪಡುವುದಿಲ್ಲ. ಈ ಬಾರಿ ನಮ್ಮ  ಸಾಮರ್ಥ್ಯವನ್ನು ಸಾಬೀತು ಮಾಡಿಕೊಳ್ಳುವ ಅವಕಾಶವಿತ್ತು... ಇದಕ್ಕಾಗಿ ನಮ್ಮ ಅಥ್ಲೀಟ್'ಗಳು ಕೂಡ ಶ್ರಮ ಹಾಕುತ್ತಿದ್ದಾರೆ. ಆದರೆ, ನಾನು ಟೀಕಿಸುತ್ತಿರುವುದು ಅಧಿಕಾರಿಗಳು,  ರಾಜಕಾರಣಿಗಳನ್ನ" ಎಂದು ಖ್ಯಾತ ಅಂಕಣಗಾರ್ತಿ ಹೇಳಿದ್ದಾರೆ.

ಕಳೆದ ಆಗಸ್ಟ್ 8ರಂದು ಭಾರತದ ಪುರುಷರ ಹಾಕಿ ತಂಡ ಜರ್ಮನಿ ವಿರುದ್ಧ ಸೋಲನುಭವಿಸಿ ರಿಯೊ ಒಲಿಂಪಿಕ್ಸ್ ನಿಂದ ಹೊರಬಿದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಶೋಭಾ ಡೇ, "ಒಲಿಂಪಿಕ್ಸ್'ನಲ್ಲಿ  ಟೀಂ ಇಂಡಿಯಾದ ಗುರಿ ಇದು: ರಿಯೋಗೆ ಹೋಗಿ, ಸೆಲ್ಫೀ ತೆಗೆಯಿರಿ. ಬರಿಗೈಲಿ ವಾಪಸ್ ಬನ್ನಿ. ಹಣ ಮತ್ತು ಅವಕಾಶ ಎಲ್ಲಾ ವ್ಯರ್ಥ.." ಎಂದು ಟ್ವೀಟ್ ಮಾಡಿದ್ದರು. ಶೋಭಾ ಅವರ ಈ ಟ್ವೀಟ್'ಗೆ  ಟ್ವಿಟರ್ ನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸ್ವತಃ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಾಗೂ ಕಳೆದ ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಅಭಿನವ್ ಬಿಂದ್ರಾ ಶೋಭಾ ಅವರನ್ನು ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com