ಉನಾ ವಿವಾದ: ಗುಜರಾತ್ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿದ 50 ಕಾಂಗ್ರೆಸ್ ಶಾಸಕರ ಅಮಾನತು

ಉನಾ ದಲಿತರ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಗುಜರಾತ್ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿದ 50 ಕಾಂಗ್ರೆಸ್ ಶಾಸಕರನ್ನು ಅಲ್ಲಿನ ಸ್ಪೀಕರ್ ಅಮಾನತು ಮಾಡಿರುವುದಾಗಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಾಂಧಿನಗರ: ಉನಾ ದಲಿತರ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಗುಜರಾತ್ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿದ 50 ಕಾಂಗ್ರೆಸ್ ಶಾಸಕರನ್ನು ಅಲ್ಲಿನ ಸ್ಪೀಕರ್ ಅಮಾನತು ಮಾಡಿರುವುದಾಗಿ ಸೋಮವಾರ ತಿಳಿದುಬಂದಿದೆ.

ಗುಜರಾತ್ ವಿಧಾನಸಭೆಯಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಅಧಿವೇಶನದ ವೇಳೆ ಕಾಂಗ್ರೆಸ್ ಶಾಸಕರು ಉನಾದಲ್ಲಿ ನಡೆದಿದೆ ಎನ್ನಲಾಗಿರುವ ದಲಿತರ ಮೇಲಿನ ಹಲ್ಲೆ ಪ್ರಕರಣವಿಡಿದು ಸಾಕಷ್ಟು ಗದ್ದಲವನ್ನು ಸೃಷ್ಟಿಸಿದ್ದರು.

ಅಲ್ಲದೆ, ಬಿಜೆಪಿ ಸರ್ಕಾರ ದಲಿತ ವಿರೋಧಿ ಸರ್ಕಾರ ಎಂದು ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿ, ಆಡಳಿತಾರೂಢ ಸರ್ಕಾರದ ಸಚಿವರ ಮೇಲೆ ಬಳೆಗಳನ್ನು ಎಸೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್ ಶಾಸಕರು ನಡೆಸಿದ ಪ್ರತಿಭಟನೆ ವಿಧಾನಸಭೆಯಲ್ಲಿ ಸಾಕಷ್ಟು ಗದ್ದಲವನ್ನು ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ರಮಣ್ ಲಾಲ್ ವೊರಾ ಅವರು ಪ್ರತಿಭಟನೆಯನ್ನು ಹಿಂಪಡೆದು ಶಾಂತಿಯುತವಾಗಿ ಚರ್ಚೆ ನಡೆಸುವಂತೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ, ಸ್ಪೀಕರ್ ಮಾತನ್ನು ನಿರ್ಲಕ್ಷಿಸಿ ಶಾಸಕರು ಪ್ರತಿಭಟನೆ ನಡೆಸುತ್ತಿದ್ದರು.

ನಂತರ ಮಾರ್ಷೆಲ್ಸ್ ರನ್ನು ಕರೆದ ಸ್ಪೀಕರ್ ಪ್ರತಿಭಟನಾ ನಿರತ ಶಾಸಕರನ್ನು ಹೊರಗೆ ಹಾಕುವಂತೆ ತಿಳಿಸಿದರು. ಅಲ್ಲದೆ, ಕೆಲ ಶಾಸಕರ ಹೆಸರನ್ನು ಸೂಚಿಸಿ ಅಮಾನತು ಶಿಕ್ಷೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com