
ನವದೆಹಲಿ: ದಲಿತರು ಹಾಗೂ ಹಿಂದುಳಿದ ಜನರು ರಾಷ್ಟ್ರೀಯವಾದಿಗಳಲ್ಲವೇ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬುಧವಾರ ಪ್ರಶ್ನೆ ಹಾಕಿದ್ದಾರೆ.
ನಿನ್ನೆ ದೆಹಲಿಯಲ್ಲಿ ನಡೆದ ಬಿಜೆಪಿಯ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ರಾಷ್ಟ್ರೀಯವಾದಿಗಳು ಬಿಜೆಪಿ ಜೊತೆಗಿದ್ದು, ಇದೀಗ ದಲಿತರು ಹಾಗೂ ಹಿಂದುಳಿದವರನ್ನು ಸೇರ್ಪಡೆಗೊಳಿಸಲು ಪಕ್ಷ ಉದ್ದೇಶಿಸಿದೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿಯವರು, ರಾಷ್ಟ್ರೀಯವಾದಿಗಳ ಗುರ್ತಿಕೆಗಳಿಲ್ಲದೆಯೇ ಬಿಜೆಪಿ ದಲಿತರು ಹಾಗೂ ಹಿಂದುಳಿದವರಿಗಾಗಿ ಕೆಲಸ ಮಾಡಲು ಹೊರಟಿದೆ. ರಾಷ್ಟ್ರೀಯವಾದಿಗಳು ಬಿಜೆಪಿಯೊಂದಿಗಿದ್ದು, ದಲಿತರು ಹಾಗೂ ಹಿಂದುಳಿದವರನ್ನು ಸೇರ್ಪಡೆಗೊಳಿಸಲು ಕೆಲಸ ಮಾಡಲಾಗುತ್ತದೆ ಎಂದು ಮೋದಿಯವರು ಹೇಳಿದ್ದಾರೆ. ಅಂದರೆ ದಲಿತರು ಹಾಗೂ ಹಿಂದುಳಿದವರು ರಾಷ್ಟ್ರೀವಾದಿಗಳೇ ಅಲ್ಲ ಎಂಬುದು ಇದರ ಅರ್ಥವೇ ಮೋದಿ ಜೀ ಎಂದು ಪ್ರಶ್ನಿಸಿದ್ದಾರೆ.
Advertisement